ETV Bharat / state

ಕಲಬುರಗಿ: ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳುಗಿ ಬಾಲಕ ಸಾವು

ನೀರು ನಿಂತಿದ್ದ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ.

ನೀರಿನಲ್ಲಿ ಮುಳಗಿ ಬಾಲಕ ಸಾವು
ನೀರಿನಲ್ಲಿ ಮುಳಗಿ ಬಾಲಕ ಸಾವು
author img

By

Published : Feb 22, 2023, 6:15 PM IST

Updated : Feb 22, 2023, 10:57 PM IST

ಮೃತ ಬಾಲಕನ ತಾಯಿ ಪ್ರತಿಕ್ರಿಯೆ

ಕಲಬುರಗಿ: ಪೋಷಕರು ಬೇಡ ಎಂದರೂ ಸ್ನೇಹಿತರೊಂದಿಗೆ ಬುದ್ಧವಿಹಾರ ನೋಡಲು ಬಂದಿದ್ದ ಬಾಲಕ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗ ನಡೆದಿದೆ. ಬೀದರ್ ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಆಶೀಶ್ ಗುಪ್ತಾ (15) ಮೃತಪಟ್ಟಿದ್ದಾನೆ.

ಕಲಬುರಗಿಯಲ್ಲಿದ್ದ ಸ್ನೇಹಿತನ ಮನೆಗೆ ಭೇಟಿ ಕೊಟ್ಟು ಆರು ಜನ ಸೇರಿಕೊಂಡು ನಗರದ ಶ್ರೀರಾಮತೀರ್ಥ ದೇವರ ದರ್ಶನ ಮಾಡಿದ್ದಾರೆ‌. ಬಳಿಕ ಶೌಚಾಲಯಕ್ಕೆಂದು ದೇವಸ್ಥಾನದ ಹಿಂಭಾಗದ ಕಲ್ಲು ಕ್ವಾರಿ ಬಳಿ ಹೋಗಿದ್ದಾರೆ‌. ಶೌಚ ಮುಗಿಸಿಕೊಂಡು ನೀರು ತುಂಬಿದ್ದ ಕಲ್ಲಿನ ಕ್ವಾರಿಯಲ್ಲಿ ಈಜಾಡುವಾಗ ಆಶೀಶ್ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಸ್ನೇಹಿತರು ಅಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರಿಂದ ಸೀರೆ ಪಡೆದು ಆಶೀಶ್‌ನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಫಲ ನೀಡಲಿಲ್ಲ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ನೀರಿನಲ್ಲಿ ಮುಳುಗಿದ್ದ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ‌. ನಾಲ್ಕೈದು ಗಂಟೆಗಳ ಕಾಲ ಶೋಧಿಸಿ ಮೃತದೇಹ ಹೊರತೆಗೆದಿದ್ದಾರೆ. ಪೋಷಕರು ಬೇಡ ಎಂದು ಎಷ್ಟೇ ಹೇಳಿದರೂ ಕೇಳದೇ ಬಾಲಕ ತನ್ನ ಸ್ನೇಹಿತರ ಜೊತೆಗೂಡಿ ಇಲ್ಲಿಗೆ ಬಂದಿದ್ದ. ಬುದ್ದ ವಿಹಾರ ವೀಕ್ಷಣೆ ಮಾಡುವ ಹಂಬಲದಿಂದ ಬಂದಿದ್ದು ನೋಡುವುದಕ್ಕೂ ಮುನ್ನವೇ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಯಿ ಸುಧಾಮಣಿ ಗುಪ್ತಾ ಮಾತನಾಡಿ, ಬೆಳಗ್ಗೆ ಆಶೀಶ್​ ಸ್ನೇಹಿತರು ಮನೆ ಬಳಿ ಬಂದು ಬುದ್ದ ವಿಹಾರ ನೋಡಲು ಹೊರಟಿರುವುದಾಗಿ ಹೇಳಿದ್ದಾರೆ. ನಾನು ನಿರಾಕರಿಸಿ ಶಾಲೆಗೆ ಹೋಗುವಂತೆ ಹೇಳಿದ್ದೆ. ಇಷ್ಟಾದರೂ ಕೇಳದೆ ಸ್ನೇಹಿತರೊಂದಿಗೆ ಹೋಗುವುದಾಗಿ ಪಟ್ಟು ಹಿಡಿದು ಹೋಗಿದ್ದ. ಬಳಿಕ 12 ಗಂಟೆ ಸುಮಾರಿಗೆ ನಡೆದಿರುವ ಘಟನೆ ಬಗ್ಗೆ ತಿಳಿದು ಬಂತು ಎಂದು ತಿಳಿಸಿದರು.

ಆಶೀಶ್​​ ಸ್ನೇಹಿತ ಪ್ರಜ್ವಲ್​ ಮಾತನಾಡಿ, ರಾಮತೀರ್ಥ ದೇವಸ್ಥಾನ ದರ್ಶನ ಪಡೆದು ನಂತರ ದೇವಸ್ಥಾನದ ಹಿಂಭಾಗದಲ್ಲಿ ಶೌಚಾಲಯಕ್ಕೆಂದು ತೆರಳಿದ್ದೆವು. ಈ ವೇಳೆ ಅಲ್ಲಿಯ ಕಲ್ಲಿನ ಕ್ವಾರಿಯಲ್ಲಿ ನೀರು ನಿಂತಿರೋದು ಕಂಡು ಆಶೀಶ್​ ಈಜಾಡಲು ನೀರಿಗಿಳಿದಿದ್ದಾನೆ. ಬೇಡ ಎಂದರೂ ನೀರಿನಲ್ಲಿ ಈಜುತ್ತ ಹೋಗಿ ಮಧ್ಯದಲ್ಲಿ ಆಯಾಸ ಹೆಚ್ಚಾಗಿ ಸಿಲುಕಿ ಮುಳುಗಲಾರಂಭಿಸಿದ. ಅವನನ್ನು ಕಾಪಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾನೆ. ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ: ನೀರು ತುಂಬಿದ ಕಲ್ಲು ಕ್ವಾರಿಯಲ್ಲಿ ಈಜಲು ಹೋದ ಯುವಕ ಸಾವು

Last Updated : Feb 22, 2023, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.