ಕಲಬುರಗಿ : ಕಲ್ಲು ಗಣಿಯಲ್ಲಿ ಆಯತಪ್ಪಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ.
ತಂದೆಯೊಂದಿಗೆ ಹೋದಾಗ ನೀರು ತುಂಬಿದ ಗಣಿಗೆ ಬಿದ್ದು ಈ ಅವಘಡ ಸಂಭವಿಸಿದೆ. ವಾಡಿ ಪಟ್ಟಣದ 3ನೇ ತರಗತಿಯಲ್ಲಿ ಓದುತ್ತಿದ್ದ ಮಂಗೇಶ್ ಮಿಥೂನ್ ಜಾಧವ್ (08) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ.
ಮಳೆ ನೀರಿನಲ್ಲಿ ಮುಳುಗಿದ್ದ ಹಾಸುಗಲ್ಲು ಕತ್ತರಿಸುವ ವಿದ್ಯುತ್ ಕೇಬಲ್ ಎಳೆಯುವಾಗ ಗಣಿಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಸಿಎಂ ಭೇಟಿಯಾದ ಶೋಭಾ ಕರಂದ್ಲಾಜೆ : ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚನೆ