ಕಲಬುರಗಿ: ಅಂಧ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಬಾಲಕರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಶಂಕರಗೌಡ ಶೇ. 86.56, ಸಂತೋಷ್ ಶೇ.85.28, ಅನಿಲಕುಮಾರ್ ಶೇ.72.48, ಶ್ಯಾಮ್‍ರಾವ್ ಶೇ.71.65, ಮಂಜುನಾಥ ಶೇ. 68.96, ಮೌಲಾಲಿ ಶೇ. 68, ಬಲಭೀಮ-66.04, ಪರಶುರಾಮ್ ಶೇ.63.36 ರಷ್ಟು ಅಂಕ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ.