ಕಲಬುರಗಿ: ಹವಾಮಾನ ವೈಪರೀತ್ಯ ಕಾರಣದಿಂದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದ ಎರಡು ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ.
ಬೆಂಗಳೂರು-ಕಲಬುರಗಿ ನಡುವಿನ ಅಲಯನ್ಸ್ ಏರ್ ವಿಮಾನವನ್ನು ಹೈದರಾಬಾದ್ಗೆ ಕಳುಹಿಸಲಾಗಿದೆ.
ಇದೇ ರೀತಿ, ಸ್ಟಾರ್ ಏರ್ ವಿಮಾನವನ್ನು ಮರಳಿ ಬೆಂಗಳೂರಿಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಿದ್ದು ಲ್ಯಾಂಡಿಂಗ್ಗೆ ತೊಂದರೆ ಉಂಟಾಗಿದೆ.
ಇದಕ್ಕೂ ಮುನ್ನ ಸುಮಾರು 40 ನಿಮಿಷಗಳ ಕಾಲ ಕಲಬುರಗಿಯ ಸುತ್ತಮುತ್ತ ವಿಮಾನಗಳು ಹಾರಾಡಿದ್ದು, ಲ್ಯಾಂಡಿಂಗ್ಗೆ ಪ್ರಯತ್ನ ನಡೆಸಿದ್ದವು.