ETV Bharat / state

ಪಿಎಸ್ಐ ಪರೀಕ್ಷೆ ಅಕ್ರಮ ಹೊರಹಾಕಿದ್ದ ಶ್ರೀಧರ ಅರೆಸ್ಟ್​ - ಪಿಎಸ್ಐ ಪರೀಕ್ಷೆ ಅಕ್ರಮ ಸಂಬಂಧ ಮತ್ತೋರ್ವ ಆರೋಪಿಯ ಬಂಧನ

ಪಿಎಸ್ಐ ಪರೀಕ್ಷೆ ಅಕ್ರಮ ಹೊರಬೀಳಲು ಪ್ರಮುಖ ಕಾರಣಿಕರ್ತನೇ ಈ ಶ್ರೀಧರ ಪವಾರ್. ಪ್ರಕರಣದ ಆರಂಭದಲ್ಲಿ ಬಂಧಿತನಾದ‌ ಮೊದಲನೇ ಆರೋಪಿ ಸೇಡಂ ಮೂಲದ ವಿರೇಶ್‌ನ ಓಎಮ್ಆರ್ ಶೀಟ್ ಬಯಲು ಮಾಡುವ ಮೂಲಕ ಪ್ರಕರಣ ಬೆಳಕಿಗೆ ಬರಲು ಈತ ಕಾರಣನಾಗಿದ್ದ.

Arrest of another accused in an PSI Exam scam

author img

By

Published : May 1, 2022, 9:47 PM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಇನ್ನೋರ್ವ ಆರೋಪಿ ಶ್ರೀಧರ್ ಪವಾರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 25ಕ್ಕೆ‌ ಏರಿಕೆ ಆಗಿದೆ. ಪಿಎಸ್ಐ ಪರೀಕ್ಷೆ ಅಕ್ರಮ ಹೊರಬೀಳಲು ಪ್ರಮುಖ ಕಾರಣಿಕರ್ತನೇ ಈ ಶ್ರೀಧರ ಪವಾರ್. ಪ್ರಕರಣದ ಆರಂಭದಲ್ಲಿ ಬಂಧಿತನಾದ‌ ಮೊದಲನೇ ಆರೋಪಿ ಸೇಡಂ ಮೂಲದ ವಿರೇಶ್‌ನ ಓಎಮ್ಆರ್ ಶೀಟ್ ಬಯಲು ಮಾಡುವ ಮೂಲಕ ಪ್ರಕರಣ ಬೆಳಕಿಗೆ ಬರಲು ಕಾರಣನಾಗಿದ್ದ.

ಇದನ್ನೂ ಓದಿ: ಯಾದಗಿರಿ: ವಿದ್ಯುತ್ ಟ್ರಾನ್ಸ್​ಫಾರ್ಮರ್ ಸ್ಪರ್ಶಿಸಿ ಬಾಲಕಿ ಸಾವು

ವಿರೇಶಗೆ ಪರೀಕ್ಷೆಯ ಅಕ್ರಮ‌ ಹಾದಿ ತೋರಿಸಿಕೊಟ್ಟಿದ್ದಲ್ಲದೆ ಕಿಂಗ್‌ಪಿನ್ ಗಳನ್ನು ಭೇಟಿ ಮಾಡಿಸಿ ವ್ಯಾಪಾರ ಕುದುರಿಸಿಕೊಟ್ಟಿದ್ದನಂತೆ. ಬಳಿಕ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇಮಕಾತಿ ತಾತ್ಕಾಲಿಕ ಪಟ್ಟಿಯಲ್ಲಿ ವಿರೇಶನ ಹೆಸರು ಬಂದಾಗ ಹಣಕ್ಕಾಗಿ ಶ್ರೀಧರ ಬೇಡಿಕೆ ಇಟ್ಟಿದ್ದನಂತೆ. ಆಗ ವಿರೇಶ ಹಣ ಕೊಡದಿದ್ದಕ್ಕೆ ಕೋಪಗೊಂಡು ವಿರೇಶನ ಓಎಮ್‌ಆರ್ ಸೀಟ್​ನ್ನು ವಾಟ್ಸಪ್‌ಗಳಿಗೆ ಹರಿಬಿಟ್ಟು ಪ್ರಕರಣ ಬೆಳಕಿಗೆ ಬರಲು ಕಾರಣಿಕರ್ತನಾಗಿದ್ದ ಅಂತ ಹೇಳಲಾಗ್ತಿದೆ.

ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ಸಿಐಡಿ ನಡೆಸಲಿದೆ.

ಹೆಚ್ಚಿನ ಓದಿಗೆ:ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗ: ಪರೀಕ್ಷಾ ಪ್ರಕ್ರಿಯೆ ರದ್ದುಪಡಿಸಿದ ರಾಜ್ಯ ಸರ್ಕಾರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.