ಕಲಬುರಗಿ: ಕಮಲಾಪೂರ ತಾಲೂಕಿನ ತಡಕಲ್ ಗ್ರಾಮದಲ್ಲಿ ನಡೆದಿದ್ದ ಸಹೋದರರ ಡಬಲ್ ಮರ್ಡರ್ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಡಕಲ್ ಗ್ರಾಮದ ಚಂದ್ರಕಾಂತ ಬಂಧಿತ ಆರೋಪಿ. ಕೊಲೆ ನಡೆದ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಮಹಾಗಾಂವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಚಂದ್ರಕಾಂತನ ಅಕ್ಕನ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರು ಎಂಬ ಶಂಕೆ ಹಿನ್ನೆಲೆ ಸಹೋದರರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಓದಿಗಾಗಿ: ಡಬಲ್ ಮರ್ಡರ್ : ಸಂಕ್ರಾಂತಿ ಕರಿ ದಿನವೇ ಮಸಣ ಸೇರಿದ ಸಹೋದರರು
ಸಂಕ್ರಾಂತಿಯ ದಿನದಂದು ಹಾಡಹಗಲಲ್ಲೇ ಚಂದ್ರಕಾಂತ, ಮಾರಕಾಸ್ತ್ರಗಳಿಂದ ನಿಲೇಶ್ ಮತ್ತು ಆತನ ಸಹೋದರ ರಾಜುನನ್ನು ಕೊಚ್ಚಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.