ಕಲಬುರಗಿ: ಕೊರೊನಾ ಸೋಂಕಿನ ಜೊತೆ ಸಕ್ಕರೆ ಕಾಯಿಲೆ ಇದ್ದವರಿಗೆ ಮಾತ್ರ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ವಿಚಾರದಲ್ಲಿ ಯಾರು ಹೆದರಬೇಕಾಗಿಲ್ಲ. ಇದು ಆರಂಭಿಕ ಹಂತದಲ್ಲಿದೆ. ಎಲ್ಲ ಕೊರೊನಾ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಬರೋದಿಲ್ಲ. ಸೋಂಕಿತರಿಗೆ ಸಕ್ಕರೆ ಕಾಯಿಲೆ ಇದ್ದರೆ ಮಾತ್ರ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ.
ಓದಿ:ಆಸ್ಪತ್ರೆಗಳಲ್ಲಿ ಆಕ್ಸಿಜನ್ ಆಡಿಟ್ ಕಡ್ಡಾಯ: ಹೈಕೋರ್ಟ್ ನಿರ್ದೇಶನದನಂತೆ ಹೊಸ ಮಾರ್ಗಸೂಚಿ
ಆ್ಯಂಟಿ ಫಂಗಸ್ ಟ್ಯಾಬ್ಲೆಟ್ ಈಗಾಗಲೇ ಮುಂಬೈನಿಂದ ತರಿಸಲಾಗಿದೆ. ಕಲಬುರಗಿಯಲ್ಲಿ ಸದ್ಯ ಇಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ನಾನೇ ಖುದ್ದಾಗಿ ಇಬ್ಬರಿಗೆ ಮೆಡಿಸಿನ್ ತರಿಸಿದ್ದೇನೆ ಎಂದರು.