ಕಲಬುರಗಿ: ಕಾಡು ಪ್ರಾಣಿಗಳ ಬೇಟೆಯಲ್ಲಿ ನಿರತರಾಗಿದ್ದ ಮೂವರನ್ನು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಪ್ಪ ಕಾಳೆ (35), ಅರ್ಜುನ ಪವಾರ್ (26) ರಾಜು ಪವಾರ್ (38) ಬಂಧಿತ ಆರೋಪಿಗಳು.
ಈ ಮೂವರು ಅಕ್ರಮವಾಗಿ ಕಾಡು ಮೊಲ ಬೇಟೆಯಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಬಂಧಿತರಿಂದ ಆಯುಧಗಳು ಹಾಗೂ ಐದು ಮೃತ ಮೊಲಗಳನ್ನು ಜಪ್ತಿ ಮಾಡಲಾಗಿದೆ. ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.