ETV Bharat / state

ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್​ ಯತ್ನ ಆರೋಪ.. ದೂರು, ಪ್ರತಿ ದೂರು ದಾಖಲು!

ಕಲಬುರಗಿಯ ಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ರಣರಂಗವಾಗಿ ಮಾರ್ಪಟ್ಟಿದೆ. ನಾಳೆ ನಡೆಯಲಿರುವ ಚುನಾವಣೆಗೆ ಎರಡು ಗುಂಪಿನ ಸದಸ್ಯರು ದೂರು, ಪ್ರತಿ ದೂರು ಸಲ್ಲಿಸಿದ್ದಾರೆ.

Alleged of attempted kidnapping of GP member  attempted kidnapping of GP member in Kalaburagi  GP president election  ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್​ ಯತ್ನ ಆರೋಪ  ಪ್ರತಿ ದೂರು ದಾಖಲು  ಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ  ಚುನಾವಣೆಗೆ ಎರಡು ಗುಂಪಿನ ಸದಸ್ಯರು ದೂರು  ಒಂದು ಬಣದ ಮೇಲೆ ಕಿಡ್ನ್ಯಾಪ್​ ಆರೋಪ  ಗಲಾಟೆ ನಡೆದಿರುವ ವಿಷಯ ತಿಳಿದ ಕುಟುಂಬಸ್ಥರು  ಕಲಬುರಗಿಯ ಕಾಕಡೇ ಚೌಕ್‌ ನಿವಾಸಿ  ನಾಗಮ್ಮ ಅವರಿದ್ದ ಹೊಲ
ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್​ ಯತ್ನ ಆರೋಪ
author img

By

Published : Aug 3, 2023, 1:27 PM IST

ಕಲಬುರಗಿ: ಗ್ರಾಪಂ ಅಧ್ಯಕ್ಷ ಚುನಾವಣೆ ಹಿನ್ನೆಲೆ ಸಿನಿಮಿಯ ರೀತಿಯಲ್ಲಿ ಗ್ರಾಪಂ ಸದಸ್ಯೆಯೊಬ್ಬರನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಸಿಂದಗಿ ಬಿ ಗ್ರಾಮದಲ್ಲಿ ನಡೆದಿದೆ.

ಏನಿದು ಪ್ರಕರಣ: ಸಾವಳಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಶುಕ್ರವಾರದಂದು ನಡೆಯಲಿದೆ. ಅಧ್ಯಕ್ಷ ಚುನಾವಣೆಗೆ ಗ್ರಾಮದ ರಮೇಶ ಕಣಗೊಂಡ ಎಂಬುವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ 10 ಸದಸ್ಯರ ಬೆಂಬಲವಿದೆ. ಇನ್ನುಳಿದ 10 ಜನ ಸದಸ್ಯರು ತಮ್ಮ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದಾರೆ. ಇವರಲ್ಲಿ ಒಬ್ಬರು ರಮೇಶ ಕಣಗೊಂಡ ಅವರಿಗೆ ಬೆಂಬಲ ಕೊಟ್ಟರೆ ಗೆಲವು ಸರಳವಾಗಲಿದೆ ಎಂದು ಒಂದು ಬಣದ ಸದಸ್ಯರು ಆಲೋಚನೆ ಮಾಡಿದ್ದಾರೆ. ಆದರೆ ಸದಸ್ಯೆ ನಾಗಮ್ಮ ಕೊಂಡೆದ ಅವರ ಬಳಿ ತೆರಳಿದ್ದಾಗ ಈ ಘಟನೆ ಅಪಹರಣ ಪ್ರಕರಣಕ್ಕೆ ತಿರುಗಿದ್ದು, ದೂರು, ಪ್ರತಿ ದೂರು ದಾಖಲಿಸಿದ್ದಾರೆ.

ಒಂದು ಬಣದ ಮೇಲೆ ಕಿಡ್ನ್ಯಾಪ್​ ಆರೋಪ: ಗ್ರಾಪಂ ಸದಸ್ಯೆ ನಾಗಮ್ಮ ಮತ್ತು ಆಕೆಯ ಮಗ ಕಿಡ್ನ್ಯಾಪ್​ ಆರೋಪ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಆರು ಜನ ಕ್ರೂಸರ್ ವಾಹನದಲ್ಲಿ‌ ಸಿಂದಗಿ ಬಿ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ, ಹೊಲದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ನನ್ನ ಬಳಿ ಬಂದು, ನಾವು ಪೊಲೀಸರು, ನಮ್ಮೊಂದಿಗೆ ನೀವು ಬರಬೇಕು ಅಂತ ಹೇಳಿದ್ದಾರೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ಅವರು ನನ್ನ ಕುತ್ತಿಗೆಗೆ ಚಾಕು ಇಟ್ಟು ಸಿನಿಮಿಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ್ದರು. ಈ ವೇಳೆ ನಾನು ಜೋರಾಗಿ ಕೂಗಾಡಿದೆ. ಆಗ ಅಲ್ಲೇ ಹತ್ತಿರದಲ್ಲಿದ್ದ ನನ್ನ ಮಗ ಮಲ್ಲಿಕಾರ್ಜುನ ಕೊಂಡೆದ ರಕ್ಷಣೆಗೆ ದೌಡಾಯಿಸಿದ್ದರು. ಆಗ ಗಲಾಟೆ ನಡೆಯಿತು. ಗಲಾಟೆ ವೇಳೆ ನನಗೆ ಮತ್ತು ನನ್ನ ಮಗನ ಕೈ ಬೆರಳುಗಳಿಗೆ ಚಾಕು ಪೆಟ್ಟು ಬಿದ್ದಿದೆ ಎಂದು ನಾಗಮ್ಮ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಲಾಟೆ ನಡೆದಿರುವ ವಿಷಯ ತಿಳಿದ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿರುವುದನ್ನು ಅರಿತ ದುಷ್ಕರ್ಮಿಗಳು ನನ್ನನ್ನು ಬಿಟ್ಟು ಓಡಿ ಹೋಗಿದರು. ಆದರೆ ಇವರಲ್ಲಿ ಒಬ್ಬನಾದ ಶಿವರಾಜ ತೊಟದ ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ ಎಂದು ನಾಗಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗ್ರಾಮಸ್ಥರು ಆತನನ್ನು ಮರಕ್ಕೆ ಕಟ್ಟಿ ಥಳಸಿದ್ದಾರೆ. ಗಾಯಾಳುಗಳಾದ ನಾಗಮ್ಮ‌ ಹಾಗೂ ಮಲ್ಲಿಕಾರ್ಜುನರನ್ನು ಜಿಲ್ಲಾಸ್ಪತ್ರೆಗೆ‌ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಗಮ್ಮ ಮತ್ತು ಆಕೆಯ ಮಗ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಈ ಘಟನೆ ಕುರಿತಂತೆ ಸಾವಳಗಿ ಗ್ರಾಪಂ ಸದಸ್ಯ ರಮೇಶ ಕಣಗೊಂಡ ಸೇರಿ ಹತ್ತು ಜನರ ವಿರುದ್ಧ ಸಬ್ ಅರ್ಬನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿ ದೂರು ದಾಖಲು : ಗ್ರಾಮಸ್ಥರಿಂದ ಥಳಿತಕ್ಕೆ‌‌ ಒಳಗಾದ ಶಿವರಾಜ ತೊಟದ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದಸ್ಯೆ ನಾಗಮ್ಮ ಕೊಂಡೆದ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಶಿವರಾಜ್​ ಅವರು ಸಬ್ ಅರ್ಬನ್‌ ಪೊಲೀಸ್​ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ದೂರಿನ ವಿವರ: ಕಲಬುರಗಿಯ ಕಾಕಡೇ ಚೌಕ್‌ ನಿವಾಸಿಯಾದ ಶಿವರಾಜ‌ ತೊಟದ ಕೋಳಸಾ (ಇದ್ದಿಲು) ವ್ಯಾಪಾರಸ್ಥರಾಗಿದ್ದಾರೆ. ಸಾವಳಗಿ ಗ್ರಾಮದ ರಮೇಶ ಕಣಗೊಂಡ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ 10 ಜನ ಸದಸ್ಯರ ಬಲ ಇದ್ದು, ಅಧ್ಯಕ್ಷ ಸ್ಥಾನಕ್ಕೆ ಸದಸ್ಯರೊಬ್ಬರ ಕೊರತೆ ಇದೆ. ಗ್ರಾಪಂ ಸದಸ್ಯೆ ನಾಗಮ್ಮ ಅವರನ್ನು ಮನವೊಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಬುಧವಾರ ನಾನು ಮತ್ತು ಮಲ್ಲಿಕಾರ್ಜುನ್ ಕಡಗಂಚಿ ಸೇರಿ ಐವರು ಕ್ರೂಸರ್ ವಾಹನದಲ್ಲಿ ಸಿಂದಗಿ ಬಿ ಗ್ರಾಮಕ್ಕೆ ಹೋಗಿದ್ದೆವು ಎಂದು ಶಿವರಾಜ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

’’ನಾಗಮ್ಮ ಅವರಿದ್ದ ಹೊಲದ ಬಳಿ ಹೋಗಿ ರಮೇಶ ಅವರು ಅಧ್ಯಕ್ಷರಾಗಲು ಸಹಕರಿಸುವಂತೆ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೆವು. ಈ ವೇಳೆ ನಾಗಮ್ಮ ಅವರ ಪುತ್ರರಾದ ರಾಜು, ಜಗದೇವಪ್ಪ ಹಾಗೂ ಪಾರ್ವತಿ ಸೇರಿ ಕೇಲವರು ಸ್ಥಳಕ್ಕೆ ಬಂದು ಕಿಡ್ನ್ಯಾಪ್ ಮಾಡಲು ಬಂದಿದ್ದಿರಾ ಅಂತ ಅವ್ಯಾಚ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದರು. ಇದರಿಂದ ನನ್ನ ಜೊತೆಗಿದ್ದವರು ಓಡಿ ಹೋಗಬೇಕಾಯಿತು‘‘ ಎಂದು ಶಿವರಾಜ ದೂರಿನಲ್ಲಿ ಬರೆದಿದ್ದಾರೆ.

’’ನನ್ನನ್ನು ಹಿಡಿದು ನಾಗಮ್ಮ ತಮ್ಮ ಕೈಯಲ್ಲಿದ್ದ ವಸ್ತುವಿನಿಂದ ಕಿವಿ ಭಾಗಕ್ಕೆ ಹಲ್ಲೆ‌ ಮಾಡಿದರು. ಆಕೆಯ ಮಗ ಕಲ್ಲು, ಕಟ್ಟಿಗೆ, ಕೈಯಿಂದ ಹೊಡೆದು‌ ಮುಖ ಹಾಗೂ ದೇಹದ ಹಲವಡೆ ಗಾಯ ಮಾಡಿದರು‘‘ಎಂದು ಶಿವರಾಜ ದೂರಿನಲ್ಲಿ ಆರೋಪಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿವರಾಜರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡಿದ ನಾಗಮ್ಮ‌ ಕೊಂಡೆದ, ಮಲ್ಲಿಕಾರ್ಜುನ‌ ಕೊಂಡೆದ, ಜಗದೇವ, ಪಾರ್ವತಿ ವಿರುದ್ಧ ಕ್ರಮ‌ಕೈಗೊಳ್ಳಬೇಕೆಂದು ಶಿವರಾಜ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಎರಡು ಕಡೆಯಿಂದ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಮೂಲಕ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ತಿಳಿದು ಬರಬೇಕಾಗಿದೆ.

ಓದಿ: ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ನೀರಿನ ಟ್ಯಾಂಕ್ ಕುಸಿದು ಇಬ್ಬರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.