ಕಲಬುರಗಿ: ಗ್ರಾ.ಪಂ. ಚುನಾವಣೆಯಿಂದ ಹಿಂದೆ ಸರಿಯುವಂತೆ ಅಭ್ಯರ್ಥಿ ಮಹಾಲಕ್ಷ್ಮಿಯವರ ಪತಿ ಶರಣಪ್ಪ ಪೂಜಾರಿಗೆ ಎದುರಾಳಿ ಅಭ್ಯರ್ಥಿ ಪಿಸ್ತೂಲ್ನಿಂದ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಮಹಾಲಕ್ಷ್ಮಿ ಪೂಜಾರಿ ಅವರನ್ನು ಕಣದಿಂದ ಹಿಂದೆ ಸರಿಸುವಂತೆ ಅವರ ಪತಿ ಶರಣಪ್ಪ ಪೂಜಾರಿಗೆ, ಎದುರಾಳಿ ಅಭ್ಯರ್ಥಿ ಬೀರಲಿಂಗ ಪೂಜಾರಿ ಎಂಬುವವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಓದಿ: ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ - ಗ್ರೌಂಡ್ ರಿಪೋರ್ಟ್
ಬೀರಲಿಂಗ ಪೂಜಾರಿ ತನ್ನ ಸಹಚರರೊಂದಿಗೆ ಕಾರಿನಲ್ಲಿ ಪಂಚಾಯಿತಿಗೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ. ಒಂದು ವೇಳೆ ನಾಮಪತ್ರ ವಾಪಸ್ ಪಡೆಯದೆ ಹೋದ್ರೆ, ನಿನ್ನ ಮನೆ ಬಳಿ ನಮ್ಮವರು ಇದ್ದಾರೆ. ನಿನ್ನ ಹೆಂಡತಿಯನ್ನ ಬಿಡೋದಿಲ್ಲ ಎಂಬ ಬೆದರಿಕೆ ಹಾಕಿರುವ ಹಿನ್ನೆಲೆ ಹೆಂಡತಿಯ ನಾಮಪತ್ರಕ್ಕೆ ಸೂಚಕರಾಗಿದ್ದ ಶರಣಪ್ಪ ಪೂಜಾರಿ ನಾಮಪತ್ರ ಹಿಂಪಡೆದಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.