ಕಲಬುರಗಿ: ಅಫಜಲಪುರ ತಾಲೂಕಿನ ರೇವೂರ ಗ್ರಾಮದ ಬಳಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ದೇಹ ಪತ್ತೆಯಾಗಿದ್ದು, ಕೊಲೆ ಮಾಡಿ ದೇಹಕ್ಕೆ ಬೆಂಕಿಯಿಟ್ಟು ಬಳಿಕ ದುಷ್ಕರ್ಮಿಗಳು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತಳನ್ನು ಸುಮಾರು 18 ವರ್ಷ ವಯಸ್ಸಿನ ಯುವತಿ ಎಂದು ಅಂದಾಜಿಸಲಾಗಿದೆ. ರೇವೂರ(ಬಿ) ಹಾಗೂ ಚಿಂಚೋಳಿ ಗ್ರಾಮದ ಹೆದ್ದಾರಿ ಬದಿ ಯುವತಿಯ ಶವ ಪತ್ತೆಯಾಗಿದೆ. ಮೃತದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಯುವತಿಯ ದೇಹ ಇರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಓದಿ : ಹಿಟ್ & ರನ್ ಕೇಸ್: ಡೆಲಿವರಿ ಬಾಯ್ಸ್ ಮೇಲೆ ಕಾರು ಹರಿಸಿದ್ದ ಆರೋಪಿ ಪೊಲೀಸರ ಬಲೆಗೆ
ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ವಿಶ್ವನಾಥ ಮುದರಡ್ಡಿ, ಪಿಎಸ್ಐ ಅಶೋಕ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.