ಕಲಬುರಗಿ : ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆ ಮೇಲೆ ದೇವರು, ಸ್ವಾಮೀಜಿಗಳು ಅಥವಾ ಮನೆಯ ಹಿರಿಯರ ಭಾವಚಿತ್ರ ಮುದ್ರಿಸುವುದು ಸಾಮಾನ್ಯ. ಆದರೆ, ಇಲ್ಲೋರ್ವ ಯುವಕ ತನ್ನ ಮದುವೆ ಆಮಂತ್ರಣ ಪತ್ರಿಕೆ ಮೇಲೆ ಸೈನಿಕರು ಹಾಗೂ ಮಹಾನ್ ವ್ಯಕ್ತಿಗಳ ಫೋಟೊ ಮುದ್ರಿಸಿ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಅಫಜಲಪುರ ಪಟ್ಟಣದ ಯುವಕ ಸುನೀಲ್ ಶೆಟ್ಟಿ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ಸೇನೆಯ ಕಲರ್ನಲ್ಲಿ ಮಾಡಿಸಿದ್ದು, ಸೈನಿಕ ಸೆಲ್ಯೂಟ್ ಮಾಡುವುದು, ಹುತಾತ್ಮ ಸ್ತಂಭ, ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಾದ ನೇತಾಜಿ ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯ್ ಪಟೇಲ್, ಚಂದ್ರಶೇಖರ್ ಆಜಾದ್ ಸೇರಿ ಇತರ ಮಹನಿಯರ ಫೋಟೋಗಳನ್ನು ಆಮಂತ್ರಣ ಪತ್ರಿಕೆ ಮೇಲೆ ಮುದ್ರಿಸಿದ್ದಾರೆ. ಜೊತೆಗೆ ಕೊನೆಯ ಪುಟದಲ್ಲಿ 2021ರ ಕ್ಯಾಲೆಂಡರ್ ಪ್ರಿಂಟ್ ಮಾಡಿ ಗಮನ ಸೆಳೆದಿದ್ದಾರೆ.
ಓದಿ: ಶಾಲಾವರಣದ ಕಳೆ ಹೆಚ್ಚಿಸಿದ SSLC,PUC ವಿದ್ಯಾರ್ಥಿಗಳ ಕಲರವ
ಸುನೀಲ್ ಶೆಟ್ಟಿ ವಿವಾಹ ಜನವರಿ 10ರಂದು ನಡೆಯಲಿದೆ. ಪವಿತ್ರ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಸುನೀಲ್ ಕಾಲಿಡಲಿದ್ದಾರೆ.