ETV Bharat / state

ಗಂಡ ನಾಪತ್ತೆಯಾದರೂ ಚಿಂತಿಸದ ಪತ್ನಿ.. ದೂರು ಕೊಟ್ಟಾಗ ಬಯಲಾಯ್ತು ಮಹಾ ಸತ್ಯ!

ಗಂಡ ನಾಪತ್ತೆಯಾಗಿ ಒಂದೂವರೆ ತಿಂಗಳಾದರೂ ಪತ್ನಿ ಮಾತ್ರ ಚಿಂತಿಸುತ್ತಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆಕೆಯ ವಿರುದ್ಧ ದೂರು ಕೊಟ್ಟಾಗ ಆಕೆ ಬೇರೆನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಮತ್ತ ಆ ಪ್ರಿಯಕರನ ಜೊತೆ ಸೇರಿಯೇ ಪತಿಯನ್ನು ಕೊಲೆ ಮಾಡಿರುವ ಕೃತ್ಯ ಕಲಬುರಗಿಯಲ್ಲಿ ಬಯಲಾಗಿದೆ.

a-wife-kills-husband-with-her-illicit-relationship-lover-in-kalaburagi
ಗಂಡ ನಾಪತ್ತೆಯಾದರೂ ಚಿಂತಿಸದ ಪತ್ನಿ...ಅನುಮಾನದಿಂದ ದೂರು ಕೊಟ್ಟಾಗ ಬಯಲಾಯ್ತು ಮಹಾ ಸತ್ಯ!
author img

By

Published : Jul 3, 2022, 3:29 PM IST

ಕಲಬುರಗಿ: ಪರಪರುಷನ ಸಂಗಕ್ಕೆ ಬಿದ್ದ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆಗೈದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗುರಪ್ಪ ಚಿಗರಳ್ಳಿ (34) ಎಂಬಾತನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇಜೇರಿ ಗ್ರಾಮದ ನಿವಾಸಿಯಾಗಿದ್ದ ಗುರಪ್ಪ ಕಳೆದ ಮೇ 14ರಂದು ಮನೆಯಿಂದ ನಾಪತ್ತೆಯಾಗಿದ್ದ. ಮೇ 15ರಂದು ಅಫಜಲಪುರ ತಾಲೂಕಿನ ಕೇಶ್ವಾಪುರ ಬಳಿ ಗುರಪ್ಪನ ಶವ ಸಿಕ್ಕಿತ್ತು. ಉಸಿರುಗಟ್ಟಿಸಿ ಕೊಲೆ ಮಾಡಿ ಕಬ್ಬಿನ ಹೊಲದಲ್ಲಿ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಆದರೆ, ಶವವನ್ನು ಯಾರು ಗುರುತಿಸದೇ ಇದ್ದಿದ್ದರಿಂದ ಅನಾಮಧೇಯ ವ್ಯಕ್ತಿ ಅಂತ ಪೊಲೀಸರು ಸುಮ್ಮನಾಗಿದ್ದರು. ಈಗ ಒಂದೂವರೆ ತಿಂಗಳ ನಂತರ ಶನಿವಾರ ಗುರಪ್ಪನ ಶವ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ. ಅಲ್ಲದೇ, ಕೊಲೆಯಾದ ಗುರಪ್ಪನ ಪತ್ನಿ ಮಹಾದೇವಿ, ಸಂತೋಷ್, ಸತೀಶ್ ಎಂಬುವರರವಿರುದ್ಧ ಕೊಲೆಯಾದ ಗುರಪ್ಪನ ತಂದೆ ದೂರು ನೀಡಿದ್ದಾರೆ.

ಸತ್ಯ ಬಾಯ್ಬಿಟ್ಟ ಪತ್ನಿ: ಗುರಪ್ಪನ ದೂರಿನ ಆಧಾರದ ಮೇಲೆ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಾದೇವಿಯನ್ನು ಠಾಣೆಗೆ ಕರೆತಂದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಪ್ರಿಯಕರ ಸಂತೋಷನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿರುವುದಾಗಿ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾಳೆ.

ಕಳೆದ ಒಂದು ವರ್ಷದಿಂದ ಸಂತೋಷನ ಜೊತೆ ಮಹಾದೇವಿ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧಕ್ಕೆ ಪತಿ ಅಡ್ಡಿ ಬರ್ತಾನೆ ಎಂದು ತಿಳಿದು ಕೊಲೆ ಮಾಡಲಾಗಿದೆ. ಗುರಪ್ಪ ನಾಪತ್ತೆಯಾಗಿ ಒಂದೂವರೆ ತಿಂಗಳು ಆಗಿದ್ದರೂ ಗಂಡನ ಬಗ್ಗೆ ಮಹಾದೇವಿ ಚಕಾರ ಎತ್ತದೇ ಇರುವುದೇ ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಗಿ ದೂರು ನೀಡಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕ್ರೂಸರ್-ಕಾರು ನಡುವೆ ಮುಖಾಮುಖಿ ಡಿಕ್ಕಿ: ತೆಲಂಗಾಣದ ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.