ETV Bharat / state

ಕೈಗಾರಿಕಾ ಬೆಳವಣಿಗೆಗೆ ಮಾರಕ ನೂತನ ಕೈಗಾರಿಕಾ ನೀತಿ? - ನೂತನ ಕೈಗಾರಿಕಾ ನೀತಿ

ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕೈಗಾರಿಕಾ ಬೆಳವಣಿಗೆಗೆ ಮಾರಕ ನೂತನ ಕೈಗಾರಿಕಾ ನೀತಿ?
author img

By

Published : Oct 16, 2019, 2:56 PM IST

ಕಲಬುರಗಿ: ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ 2019 ರಿಂದ 2024ನೇ ಸಾಲಿನ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಸರ್ಕಾರ ಚಿಂತಿಸಿದೆ. ಇದು ಕೈಗಾರಿಕೋದ್ಯಮದ ಬೆಳವಣಿಗೆಗೆ ಮಾರಕವಾಗಲಿದೆ ಎಂಬುದು ಉದ್ಯಮಿಗಳ ಆಕ್ರೋಶ.

ಕೈಗಾರಿಕಾ ಬೆಳವಣಿಗೆಗೆ ಮಾರಕ ನೂತನ ಕೈಗಾರಿಕಾ ನೀತಿ?

ಕಲ್ಯಾಣ ಕರ್ನಾಟಕ ಭಾಗವನ್ನು ಕೈಗಾರಿಕಾ ವಲಯ-1 ರಲ್ಲಿ ಸೇರಿಸಲಾಗಿತ್ತು. ಇದ್ರಿಂದ ಒಂದಷ್ಟು ಉತ್ತೇಜನಗಳು ಸಿಗುವ ನಿರೀಕ್ಷೆ ಗರಿಗೆದರಿತ್ತು. ಈಗ ವಲಯ-1 ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಮುಂಬೈ ಕರ್ನಾಟಕದ ಕೆಲವು ಜಿಲ್ಲೆಗಳ ಸೇರ್ಪಡೆಗೆ ಹುನ್ನಾರ ನಡೆದಿದೆಯಂತೆ. ಇದರಿಂದ ಮೊದಲೇ ಕೈಗಾರಿಕೆಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂಬುದು ಹೋರಾಟಗಾರರ ಅಂಬೋಣ.

ಹೀಗಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಮತ್ತೆ ಮಲತಾಯಿ ಧೋರಣೆ ಮಾಡ್ತಿರೋದನ್ನು ಸರ್ಕಾರ ಕೈಬಿಡಬೇಕೆಂಬುದೇ ಕಲ್ಯಾಣ ಕರ್ನಾಟಕ ಜನರ ಆಗ್ರಹ.

Intro:ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೊಂದಾಗಿ ಇಲ್ಲಿನ ಯೋಜನೆಗಳನ್ನು ಹೈಜಾಕ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು ಬಿಟ್ರೆ ಇಲ್ಲಿ ಯಾವುದೆ ಹೇಳಿಕೊಳ್ಳುವಂತ ಕಲ್ಯಾಣ ಕಾರ್ಯಗಳು ನಡೆಯುತ್ತಿಲ್ಲ ಎಂಬ ಅಸಮದಾನ ಜನರಲ್ಲಿ ಹೊಗೆಯಾಡುತ್ತಿದೆ. ಹೀಗಿರುವಾಗಲೇ ಸರ್ಕಾರ ಇಲ್ಲಿನ ಯೋಜನೆಗಳನ್ನು ಸದ್ದಿಲದ್ದೆ ಹೈಜಾಕ್ ಮಾಡುವ ಮೂಲಕ ಜನರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೌದು., ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಇಲ್ಲಿನ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಧಾನಮಂಡಲ ಅಧಿವೇಶನ ಮುಕ್ತಾಯವಾದ ಕೂಡಲೇ 2019 ರಿಂದ 2024ನೇ ಸಾಲಿನ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕದ ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸೇರಿಸಲಾಗಿದೆ. ಇದು ಈ ಭಾಗದ ಕೈಗಾರಿಕಾ ಉದ್ಯಮದ ಬೆಳವಣಿಗೆಗೆ ಮಾರಕವಾಗಲಿದೆ ಅನ್ನೋದು ಇಲ್ಲಿನ ಉದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೈಟ್1 : ಅಮರನಾಥ ಪಾಟೀಲ (ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ)

ಕಲ್ಯಾಣ ಕರ್ನಾಟಕ ಭಾಗವನ್ನು ಕೈಗಾರಿಕಾ ವಲಯ 1ರಲ್ಲಿ ಸೇರಿಸಲಾಗಿತ್ತು. ಇದರಿಂದ ಒಂದಷ್ಟು ಉತ್ತೇಜನಗಳು ಸಿಗುವ ಸಾಧ್ಯತೆ ಇತ್ತು. ಈಗ ವಲಯ 1ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಮುಂಬೈ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸೇರ್ಪಡೆ ಮಾಡುವ ಹುನ್ನಾರ ನಡೆದಿದೆ. ಇದರಿಂದ ಮೊದಲೇ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಈ ಭಾಗಕ್ಕೆ ಮತ್ತೊಂದು ಕೊಡಲಿ ಏಟು ಬೀಳುವ ಲಕ್ಷಣಗಳು ಕಂಡುಬರುತ್ತಿವೆ. ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ತಮ್ಮ ಪ್ರಭಾವ ಬಳಿಸಿ ಕೈಗಾರಿಕೆಗಳಿಗೆ ದೊರೆಯುವ ಅನುಕೂಲತೆಗಳನ್ನು ತಮ್ಮ ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿದ್ದಾರೆ. ಆದರೂ ನಮ್ಮ ಭಾಗದ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೈಟ್2: ಮಾರುತಿ ಮಾನ್ಪಡೆ (ಹೋರಾಟಗಾರರು)

ಈಗಾಗಲೇ ಕಲಬುರಗಿಯಲ್ಲಿ ಆರಂಭಗೊಳ್ಳಬೇಕಿದ್ದ ರೈಲ್ವೆ ವಿಭಾಗಿಯ ಕಚೇರಿ ಸ್ಥಾಪನೆಗೆ ಎಳ್ಳುನೀರು ಬಿಡಲಾಗಿದೆ. ರಾಯಚೂರು ಜಿಲ್ಲೆಗೆ ಮಂಜೂರಾಗಿದ್ದ ಐಐಟಿಯನ್ನು ಧಾರವಾಡಕ್ಕೆ ವರ್ಗಾಯಿಸಲಾಗಿದೆ. ನಂಜುಂಡಪ್ಪ ವರದಿಯನ್ವಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಬೇಕಿದ್ದ 4000 ಕೋಟಿ ಅನುದಾನ ಬದಲು ಎರಡುವರೆ ಸಾವಿರ ಕೋಟಿ ಮಾತ್ರ ನೀಡಲಾಗಿದೆ. ಈಗ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಮತ್ತೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಸರ್ಕಾರ ಕೈಬಿಡಬೇಕೆಂದು ಇಲ್ಲಿನ ಜನ ಆಗ್ರಹಿಸಿದ್ದಾರೆ.Body:ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೊಂದಾಗಿ ಇಲ್ಲಿನ ಯೋಜನೆಗಳನ್ನು ಹೈಜಾಕ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು ಬಿಟ್ರೆ ಇಲ್ಲಿ ಯಾವುದೆ ಹೇಳಿಕೊಳ್ಳುವಂತ ಕಲ್ಯಾಣ ಕಾರ್ಯಗಳು ನಡೆಯುತ್ತಿಲ್ಲ ಎಂಬ ಅಸಮದಾನ ಜನರಲ್ಲಿ ಹೊಗೆಯಾಡುತ್ತಿದೆ. ಹೀಗಿರುವಾಗಲೇ ಸರ್ಕಾರ ಇಲ್ಲಿನ ಯೋಜನೆಗಳನ್ನು ಸದ್ದಿಲದ್ದೆ ಹೈಜಾಕ್ ಮಾಡುವ ಮೂಲಕ ಜನರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೌದು., ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಇಲ್ಲಿನ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಧಾನಮಂಡಲ ಅಧಿವೇಶನ ಮುಕ್ತಾಯವಾದ ಕೂಡಲೇ 2019 ರಿಂದ 2024ನೇ ಸಾಲಿನ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕದ ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸೇರಿಸಲಾಗಿದೆ. ಇದು ಈ ಭಾಗದ ಕೈಗಾರಿಕಾ ಉದ್ಯಮದ ಬೆಳವಣಿಗೆಗೆ ಮಾರಕವಾಗಲಿದೆ ಅನ್ನೋದು ಇಲ್ಲಿನ ಉದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೈಟ್1 : ಅಮರನಾಥ ಪಾಟೀಲ (ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ)

ಕಲ್ಯಾಣ ಕರ್ನಾಟಕ ಭಾಗವನ್ನು ಕೈಗಾರಿಕಾ ವಲಯ 1ರಲ್ಲಿ ಸೇರಿಸಲಾಗಿತ್ತು. ಇದರಿಂದ ಒಂದಷ್ಟು ಉತ್ತೇಜನಗಳು ಸಿಗುವ ಸಾಧ್ಯತೆ ಇತ್ತು. ಈಗ ವಲಯ 1ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಮುಂಬೈ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸೇರ್ಪಡೆ ಮಾಡುವ ಹುನ್ನಾರ ನಡೆದಿದೆ. ಇದರಿಂದ ಮೊದಲೇ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಈ ಭಾಗಕ್ಕೆ ಮತ್ತೊಂದು ಕೊಡಲಿ ಏಟು ಬೀಳುವ ಲಕ್ಷಣಗಳು ಕಂಡುಬರುತ್ತಿವೆ. ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ತಮ್ಮ ಪ್ರಭಾವ ಬಳಿಸಿ ಕೈಗಾರಿಕೆಗಳಿಗೆ ದೊರೆಯುವ ಅನುಕೂಲತೆಗಳನ್ನು ತಮ್ಮ ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿದ್ದಾರೆ. ಆದರೂ ನಮ್ಮ ಭಾಗದ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೈಟ್2: ಮಾರುತಿ ಮಾನ್ಪಡೆ (ಹೋರಾಟಗಾರರು)

ಈಗಾಗಲೇ ಕಲಬುರಗಿಯಲ್ಲಿ ಆರಂಭಗೊಳ್ಳಬೇಕಿದ್ದ ರೈಲ್ವೆ ವಿಭಾಗಿಯ ಕಚೇರಿ ಸ್ಥಾಪನೆಗೆ ಎಳ್ಳುನೀರು ಬಿಡಲಾಗಿದೆ. ರಾಯಚೂರು ಜಿಲ್ಲೆಗೆ ಮಂಜೂರಾಗಿದ್ದ ಐಐಟಿಯನ್ನು ಧಾರವಾಡಕ್ಕೆ ವರ್ಗಾಯಿಸಲಾಗಿದೆ. ನಂಜುಂಡಪ್ಪ ವರದಿಯನ್ವಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಬೇಕಿದ್ದ 4000 ಕೋಟಿ ಅನುದಾನ ಬದಲು ಎರಡುವರೆ ಸಾವಿರ ಕೋಟಿ ಮಾತ್ರ ನೀಡಲಾಗಿದೆ. ಈಗ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಮತ್ತೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಸರ್ಕಾರ ಕೈಬಿಡಬೇಕೆಂದು ಇಲ್ಲಿನ ಜನ ಆಗ್ರಹಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.