ಕಲಬುರಗಿ: ಜಿಲ್ಲೆಯ ಅಫಜಲಪುರದಲ್ಲಿ ಶಂಕರ ಕಾಶೆ ಎಂಬುವರು ನಂದಿನಿ ಇಡ್ಲಿ ಗೃಹ ಹೆಸರಿನಲ್ಲಿ ಹೋಟೆಲ್ ತೆರೆದಿದ್ದಾರೆ. ಇಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಉಪಹಾರ ನೀಡುತ್ತಿದ್ದಾರೆ. ಇದರ ಜೊತೆಗೆ ಹೊಟೇಲ್‌ಗೆ ಬರುವ ಗ್ರಾಹಕರಿಗೆ ವಿವೇಕಾನಂದರ ಚಿಂತನೆಗಳನ್ನು ಬಿತ್ತುವ ಕೆಲಸವನ್ನೂ ಮಾಡುತ್ತಿದ್ದಾರೆ.
1975-76ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆ ಸಮಯದಲ್ಲಿ ರಾಷ್ಟ್ರ ಮತ್ತು ಸಮಾಜ ಸೇವೆಯಲ್ಲಿ ತೊಡಗಬೇಕು ಎಂಬ ಸ್ವಂತ ಇಚ್ಛೆಯಿಂದ ಸ್ನೇಹಿತರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶಾಖೆಗಳಿಗೆ ಹೋಗುತ್ತಿದ್ದ ಶಂಕರ್ ಕಾಶೆ, ಆಗಿನಿಂದ ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ವಾಕ್ಯಗಳಿಂದ ಪ್ರಭಾವಿತರಾಗಿದ್ದಾರೆ. ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರ ಹತ್ತಿರ ಪುಟ್ಟ ಇಡ್ಲಿ ಹೊಟೇಲ್ ತೆರೆದ ಇವರು, 20 ವರ್ಷಗಳಿಂದ ಗುಣಮಟ್ಟದ ಉಪಹಾರದ ಜೊತೆಗೆ ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಸ್ಪೂರ್ತಿ ತುಂಬಿದ ವಾಕ್ಯಗಳನ್ನು ಜನರಲ್ಲಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ.
ಓದಿ:ಹೆಚ್ಕೆಇ ಸಂಸ್ಥೆ ಚುನಾವಣೆ ಫಲಿತಾಂಶ : 2ನೇ ಅವಧಿಗೆ ಭೀಮಾಶಂಕರ ಬಿಲಗುಂದಿ ಪುನರಾಯ್ಕೆ
ಶಂಕರ ಅವರು ಮನೆಯಲ್ಲಿಯೂ ವಿವೇಕಾನಂದರ ಪುಸ್ತಕ ಇಟ್ಟಿದ್ದಾರೆ. ಮನೆಗೆ ಬರುವ ಅತಿಥಿಗಳಿಗೆ ವಿವೇಕಾನಂದರ ಹಲವು ಬಗೆಯ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಾ ಬರುತ್ತಿದ್ದಾರಂತೆ. ದೇಶದಲ್ಲಿ ಭಾವ್ಯಕ್ಯತೆ ಸಾರುವ ಕೆಲಸ ಮಾಡುತ್ತಿರುವ ಶಂಕರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.