ETV Bharat / state

ಕಲಬುರಗಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪ

author img

By

Published : Apr 6, 2023, 6:44 AM IST

ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Suspicious death of housewife
ಅನುಮಾನಸ್ಪದವಾಗಿ ಗೃಹಣಿ ಸಾವು
ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪ

ಕಲಬುರಗಿ : ಗೃಹಿಣಿಯೊಬ್ಬರು ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಮಹಾನಂದ (22) ಮೃತಪಟ್ಟ ಮಹಿಳೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಗೃಹಣಿ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಮೃತ ಗೃಹಿಣಿಯ ಸಹೋದರ ಶ್ರೀಶೈಲ್ ಅವರು, ಕಳೆದ ವರ್ಷ ಏಪ್ರಿಲ್ 25 ರಂದು ಫೈನಾನ್ಸ್ ಕೆಲಸ ಮಾಡಿಕೊಂಡಿದ್ದ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದ ರಾಜು ಅಟ್ಟದಮನಿ ಎಂಬಾತನ ಜೊತೆ ಮಹಾನಂದಳನ್ನು ಮದುವೆ ಮಾಡಿಕೊಡಲಾಗಿತ್ತು. ಮಗಳು ಸುಖವಾಗಿ ಇರಲೆಂದು ನಮ್ಮ ಮನೆಯವರು 50 ಗ್ರಾಂ ಚಿನ್ನಾಭರಣ, 4 ಲಕ್ಷ ರೂ. ಮೌಲ್ಯದ ಮನೆ ವಸ್ತುಗಳು ಸೇರಿದಂತೆ ಅದ್ಧೂರಿಯಾಗಿ ಮದುವೆ ಕೂಡ ಮಾಡಿಕೊಟ್ಟಿದ್ದೆವು ಎಂದು ತಿಳಿಸಿದರು.

ಇದನ್ನೂ ಓದಿ : ಶಾಸಕರುಗಳಿಗೆ ಬಿಸಿ ಮುಟ್ಟಿಸಿದ ಮತದಾರರು: ಶಾಸಕ ಅಜಯ್ ಸಿಂಗ್, ಮತ್ತಿಮೂಡಗೆ ಇರಿಸು-ಮುರಿಸು

ಆದರೇ ಮದುವೆಯಾದ ಕೆಲ ತಿಂಗಳ ನಂತರ ಗಂಡ ರಾಜು ನಾನು ಫೈನಾನ್ಸ್ ಮಾಡುವುದಕ್ಕೆ ಹೆಚ್ಚಿನ ದುಡ್ಡಿನ ಅವಶ್ಯಕತೆ ಇದೆ. ತವರು ಮನೆಯಿಂದ ಹಣ ತಂದು ಕೊಡು ಎಂದು ಪೀಡಿಸುತ್ತಿದ್ದರು. ಜೊತೆಗೆ ಇದೇ ಏಪ್ರಿಲ್ 25 ರಂದು ಮೊದಲ ಮದುವೆ ವಾರ್ಷಿಕೋತ್ಸವ ಇದ್ದ ಕಾರಣಕ್ಕೆ 20 ಗ್ರಾಂ. ಚಿನ್ನ ತೆಗೆದುಕೊಂಡು ಬರುವಂತೆ ಕೂಡ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಿದ್ದರು. ಆದರೆ ಮಹಾನಂದ ವರದಕ್ಷಿಣೆ ತರುವುದಕ್ಕೆ ನಿರಾಕರಿಸಿದ ಹಿನ್ನೆಲೆ ಬುಧವಾರ ಮಧ್ಯಾಹ್ನ ದೈಹಿಕವಾಗಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಫೋನ್ ಮಾಡಿದ್ದರು ಎಂದು ಮೃತಳ ಸಹೋದರ ಆರೋಪಿಸಿದ್ದಾರೆ.

ಬಳಿಕ ತಕ್ಷಣವೇ ಆಸ್ಪತ್ರೆಗೆ ಬರುವಷ್ಟರಲ್ಲಿ ಗಂಡನ ಮನೆಯವರು ಮೃತದೇಹವನ್ನು ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಇಷ್ಟಾದರೂ ಸಹ ಹೆಂಡತಿ ಮುಖವನ್ನು ನೋಡುವುದಕ್ಕೂ ಗಂಡ ರಾಜು ಬಂದಿಲ್ಲ ಎಂದು ಎಂದು ಮೃತಳ ಸಹೋದರ ಶ್ರೀಶೈಲ್​ ಹೇಳಿದರು. ಇನ್ನು ಈ ಘಟನೆ ಕುರಿತಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : SSLC ಪರೀಕ್ಷೆಗೆ ಅಸಲಿ ವಿದ್ಯಾರ್ಥಿ ಚಕ್ಕರ್, ನಕಲಿ ವಿದ್ಯಾರ್ಥಿ ಹಾಜರ್: ಇಬ್ಬರ ವಿರುದ್ಧವೂ ಕೇಸ್​ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.