ಕಲಬುರಗಿ: ನಿರ್ಮಾಣ ಹಂತದ ಒಳ ಕ್ರೀಡಾಂಗಣದ ಗೋಡೆ ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ.
![A construction stadium wall collapses and a worker dies](https://etvbharatimages.akamaized.net/etvbharat/prod-images/kn-klb-05-kattada-kusita-worker-death-9023578_17042020214403_1704f_1587140043_257.jpg)
ಮೃತ ಕಾರ್ಮಿಕನನ್ನು ಯಲ್ಲಪ್ಪ ಬಂಡಿವಡ್ಡರ್ (25) ಎಂದು ಗುರುತಿಸಲಾಗಿದೆ.
![A construction stadium wall collapses and a worker dies](https://etvbharatimages.akamaized.net/etvbharat/prod-images/kn-klb-05-kattada-kusita-worker-death-9023578_17042020214403_1704f_1587140043_1030.jpg)
ಜೇವರ್ಗಿ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಒಳ ಕ್ರೀಡಾಂಗಣ ಕಟ್ಟಡ ನಿರ್ಮಾಣದ ವೇಳೆ ಈ ದುರಂತ ಸಂಭವಿಸಿದೆ. ಕಳಪೆ ಕಾಮಗಾರಿ ಹಿನ್ನೆಲೆ ಕಟ್ಟಡ ಏಕಾಏಕಿ ಕುಸಿದಿದೆ ಎನ್ನಲಾಗ್ತಿದೆ.
ಗೋಡೆ ಕುಸಿಯುವ ವೇಳೆ ಕಟ್ಟಡದಲ್ಲಿ ಏಳು ಮಂದಿ ಕಾರ್ಮಿಕರಿದ್ದರು. ಕುಸಿಯುವ ವೇಳೆಗೆ ಉಳಿದವರು ತಕ್ಷಣ ಹೊರ ನಡೆದಿದ್ದಾರೆ. ಆದರೆ, ಯಲ್ಲಪ್ಪ ಹೊರಬರಲಾಗದೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಲಾಕ್ಡೌನ್ ನಡುವೆಯೂ ಕಾರ್ಮಿಕರು ಕೆಲಸ ನಿರ್ವಹಿಸಿದ್ದು ಯಾಕೆ ಎಂದು ಪ್ರಶ್ನೆ ಉದ್ಭವಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಜೇವರ್ಗಿ ಪೊಲೀಸ್ ಠಾಣೆ ಪೊಲೀಸರು, ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.