ETV Bharat / state

ಮರಕ್ಕೆ ನೇಣು ಬಿಗಿದ‌ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ - ಸಲಗರ ಬಸಂತಪುರ ತಾಂಡಾ

ಸಲಗರ ಬಸಂತಪುರ ತಾಂಡಾದ ಹೊರವಯದಲ್ಲಿರುವ ಕೃಷಿ ಜಮೀನಿನಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ.

BJP worker body found
ಮರಕ್ಕೆ ನೇಣು ಬಿಗಿದ‌ ಸ್ಥೀತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
author img

By

Published : May 12, 2023, 2:00 PM IST

Updated : May 12, 2023, 2:18 PM IST

ಕಲಬುರಗಿ: ಬಿಜೆಪಿ ಸಕ್ರಿಯ ಕಾರ್ಯಕರ್ತನೊಬ್ಬ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರ ಗ್ರಾಮದ ಹೊಲದಲ್ಲಿ ನಡೆದಿದೆ. ಆದರೆ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹಳಿಯಾಳ: ಅರಣ್ಯ ಇಲಾಖೆ ಉರಗ ರಕ್ಷಕನ ಕಾಲು ಕಡಿದು ಭೀಕರ ಹತ್ಯೆ

ಸಲಗರ ಬಸಂತಪುರ ತಾಂಡಾದ ನಿವಾಸಿ ರಾಮು ರಾಠೋಡ್(45) ಮೃತ ವ್ಯಕ್ತಿ. ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಲಗರ ಬಸಂತಪುರ ತಾಂಡಾದ ಬೂತ್​ನಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಪರ ಏಜೆಂಟ್​ ಆಗಿ ರಾಮು ಬೆಳಗ್ಗೆಯಿಂದ ಸಂಜೆವರೆಗೆ ಕಾರ್ಯ ನಿರ್ವಹಿಸಿದ್ದರು. ಬಳಿಕ ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಬಂದವರು, ಮರಳಿ ಫೋನ್ ಬಂದಿದೆ ಎಂದು ಮಧ್ಯರಾತ್ರಿ ಮನೆಯಿಂದ ಹೋರ ಹೋದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ‌ ಎಂದು ತಿಳಿದಿದೆ.

ಇದನ್ನೂ ಓದಿ: ಉಡುಪಿಯಲ್ಲಿ ರಿಕ್ಷಾ ಮೇಲೆ ಮರ ಬಿದ್ದು ಇಬ್ಬರು ಪ್ರಯಾಣಿಕರು ಸಾವು; ಚಾಲಕ ಪಾರು

ರಾಮು ರಾಠೋಡ್ ಕೆಲ ದಿನಗಳಿಂದ ಮದ್ಯ ಸೇವನೆ ಬಿಟ್ಟಿದ್ದರು. ಮತದಾನ ದಿನ ಮಾತ್ರ ಸಂಜೆ ಉದ್ದೇಶ ಪೂರ್ವಕವಾಗಿ ಯಾರೋ ಕಂಠಪೂರ್ತಿ ಕುಡಿಸಿದ್ದಾರಂತೆ, ಮದ್ಯ ಸೇವಿಸಿ ರಾತ್ರಿ ಮಗಳಿಗೆ ಪೋನ್ ಮಾಡಿದಾಗ ಮಗಳು ಬೈದು‌ ಮನೆಗೆ ಹೋಗುವಂತೆ ಹೇಳಿದ್ದಳು. ರಾತ್ರಿ 12ಗಂಟೆ ಸಮಯದಲ್ಲಿ ಮನೆಗೆ ಬಂದಿದ್ದ ರಾಮು, ಮಧ್ಯರಾತ್ರಿ ಯಾರೋ ಪೋನ್ ಮಾಡಿದರೆಂದು ಮನೆಯಿಂದ ಹೊರಗೆ ಹೋಗಿದ್ದನಂತೆ. ಬಳಿಕ ಫೋನ್ ಮಾಡಿದ್ರು ರಿಸಿವ್ ಮಾಡಿರಲಿಲ್ಲ ಹೀಗಾಗಿ ಸಂಬಂಧಿಕರು ಹುಡುಕಾಟ ಆರಂಭಿಸಿದಾಗ ಬೆಳಗ್ಗೆ ತಾಂಡಾದ ಹೊರವಯದಲ್ಲಿರುವ ಕೃಷಿ ಜಮೀನಿನಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಶಾಲೆಗೆ ಹೋಗುವಾಗ ಪ್ರತಿನಿತ್ಯ ಹಿಂಬಾಲಿಸಿ ಕಿರುಕುಳ: ನೊಂದು ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿನಿ

ರಾಮು ರಾಠೋಡ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ ಆದ್ರೂ, ಕುಟುಂಬಸ್ಥರು ಆತ್ಮಹತ್ಯೆ ಅಲ್ಲ‌ ಕೊಲೆ ಎಂದು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಕುಡಿಯುವುದು ಬಿಟ್ಟವರಿಗೆ ಕಂಠಪೂರ್ತಿ ಕುಡಿಸಿ ರಾತ್ರಿ ಮನೆಯಿಂದ ಕರೆಸಿ ಕೊಲೆ ಮಾಡಿದ್ದಾರೆ. ನಂತರ ಆತ್ಮಹತ್ಯೆ ಅಂತ ಬಿಂಬಿಸಲು‌ ನೇಣು ಹಾಕಿದ್ದಾರೆ. ಮರ ಚಿಕ್ಕದಾಗಿದ್ದು ಕಾಲು ನೆಲಕ್ಕೆ ತಾಗಿದೆ ಹೀಗಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲು ಅದು ಹೇಗೆ ಸಾಧ್ಯ ಎಂದು ಅನುಮಾನ‌ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ‌ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆಯಷ್ಟೇ ಕಲಬುರಗಿಯಲ್ಲಿ ಭೀಕರ ಕೊಲೆ ನಡೆದಿತ್ತು. ಈಗ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಸೆಪ್ಟಿಕ್​ ಟ್ಯಾಂಕ್‌ಗಿಳಿದ ಒಂದೇ ಕುಟುಂಬದ ಐವರ ದುರ್ಮರಣ

Last Updated : May 12, 2023, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.