ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ಡೆಡ್ಲಿ ವೈರಸ್ ಕೊರೊನಾ ಸೋಂಕು ಅಬ್ಬರಿಸುತ್ತಿದೆ. ಇಂದು ಒಂದೇ ದಿನ ಡೆಡ್ಲಿ ವೈರಸ್ಗೆ ಐವರು ಮೃತಪಟ್ಟಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ಓರ್ವ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇಂದೀಗ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ, ಕಲಬುರಗಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 833ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ 658 ಜನರಲ್ಲಿ ಸೋಂಕು ಧೃಡವಾಗಿದೆ. ಕಲಬುರಗಿಯಲ್ಲಿ ಸದ್ಯ 3722 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಕೊರೊನಾ 3ನೇ ಅಲೆಯಲ್ಲಿ ಒಟ್ಟು 11 ಜನ ಮೃತಪಟ್ಟಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.
ಓದಿ: ಹುಬ್ಬಳ್ಳಿ ವ್ಯಾಪಾರಿಗೆ ಹ್ಯಾಂಡ್ ಗ್ಲೌಸ್ ಮಾರಾಟ ನೆಪದಲ್ಲಿ 1.90 ಲಕ್ಷ ರೂ. ಪಂಗನಾಮ.. ಸೈಬರ್ ಠಾಣೆಗೆ ದೂರು