ಕಲಬುರ್ಗಿ : ಲಾಕ್ಡೌನ್ನಿಂದಾಗಿ ಮೂರು ತಿಂಗಳ ಕಾಲ ಅಂಗಡಿ ಬಂದ್ ಮಾಡಿ ಮನೆಯಲ್ಲಿ ಕುಳಿತಿದ್ದವರು ಅಂಗಡಿಯ ಬಾಡಿಗೆ ಕೊಡುವುದಾದ್ರೂ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದರೆ, ಇಲ್ಲೊಬ್ಬ ಕಾಂಪ್ಲೆಕ್ಸ್ ಓನರ್ ಮೂರು ತಿಂಗಳ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ಗೋವಾ ಹೋಟೆಲ್ ಬಳಿಯ ಅಶೋಕ್ ಕಾಂಪ್ಲೆಕ್ಸ್ ಮಾಲೀಕ ಲಕ್ಷ್ಮಿನಾರಾಯಣ ಮನೋವರಕರ್ ಬಾಡಿಗೆ ಮನ್ನಾ ಮಾಡಿದ ಮಾಲೀಕರು. ಅಶೋಕ್ ಕಾಂಪ್ಲೆಕ್ಸ್ನಲ್ಲಿ 65 ಮಳಿಗೆಗಳಿವೆ. ಪ್ರತಿ ತಿಂಗಳು ₹3.15 ಲಕ್ಷ ಬಾಡಿಗೆ ಬರುತ್ತಿತ್ತು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ತಮ್ಮ ಅಂಗಡಿಯ ಬಾಡಿಗೆದಾರರಿಗೆ ಮಾರ್ಚ್ ಏಪ್ರಿಲ್ ಮತ್ತು ಮೇ 3 ತಿಂಗಳು ಬಾಡಿಗೆ ಸುಮಾರು ₹9.45 ಲಕ್ಷ ಸಂಪೂರ್ಣ ಮನ್ನಾ ಮಾಡಿದ್ದಾರೆ.
ಮೂರು ತಿಂಗಳ ಕಾಲ ವ್ಯಾಪಾರ-ವಹಿವಾಟು ಇಲ್ಲದೆ ಬಾಡಿಗೆ ಕಟ್ಟುವುದು ಹೇಗೆ ಎಂದು ಚಿಂತೆಯಲ್ಲಿದ್ದ ಬಾಡಿಗೆದಾರರಿಗೆ ಫುಲ್ ರಿಲೀಫ್ ನೀಡಿದ್ದಾರೆ. ಬಾಡಿಗೆದಾರರ ಕಷ್ಟಕ್ಕೆ ನೆರವಾದ ಕಾಂಪ್ಲೆಕ್ಸ್ ಮಾಲೀಕರ ಹೃದಯ ವೈಶಾಲ್ಯತೆಗೆ ಬಾಡಿಗೆದಾರರು ಕೃತಜ್ಞತೆ ಸಲ್ಲಿಸಿದ್ದಾರೆ.