ETV Bharat / state

ಸೊನ್ನ ಬ್ಯಾರೇಜ್​ನಿಂದ ಭೀಮಾ‌ ನದಿಗೆ 15,000 ಕ್ಯೂಸೆಕ್ ನೀರು

ಸೊನ್ನ ಬ್ಯಾರೇಜ್ ಸಾಮರ್ಥ್ಯ 3.16 ಟಿ‌ಎಂ‌ಸಿ ಇದ್ದು, ಶುಕ್ರವಾರ ಸಾಯಂಕಾಲ 5.20 ಗಂಟೆ ಹೊತ್ತಿಗೆ 2.95 ಟಿಎಂಸಿ ನೀರು ಸಂಗ್ರಹಗೊಂಡಿದೆ..

Bhima river
ಸೊನ್ನ ಬ್ಯಾರೇಜ್​
author img

By

Published : Jul 24, 2020, 8:38 PM IST

ಕಲಬುರಗಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್​ಗೆ ನೀರಿನ ಒಳ ಹರಿವು ಹೆಚ್ಚಿದೆ. ಹೀಗಾಗಿ ಬ್ಯಾರೇಜ್​ನಿಂದ 15,000 ಕ್ಯೂಸೆಕ್‌ ನೀರು ಭೀಮಾ ನದಿಗೆ ಹರಿಸಲಾಗಿದೆ ಎಂದು ಭೀಮಾ ಏತ‌ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ್‌ ಆರ್ ಕಲಾಲ್ ತಿಳಿಸಿದ್ದಾರೆ.

ಬ್ಯಾರೇಜ್​ಗೆ ಸಾಯಂಕಾಲ ಒಳಹರಿವಿನ‌ ನೀರಿನ ಪ್ರಮಾಣ 15,000 ಕ್ಯೂಸೆಕ್‌ ಇದೆ. ಅಷ್ಟೇ ಪ್ರಮಾಣದ ನೀರು ನದಿಗೆ ಹರಿಬಿಡಲಾಗುತ್ತಿದೆ. ಆದ್ದರಿಂದ ನದಿ ಡಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆವಹಿಸಬೇಕು ಎಂದು ಪ್ರದೇಶದ ರೈತರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಭೀಮಾ‌ ನದಿಗೆ 15,000 ಕ್ಯೂಸೆಕ್ ನೀರು

ಸೊನ್ನ ಬ್ಯಾರೇಜ್ ಸಾಮರ್ಥ್ಯ 3.16 ಟಿ‌ಎಂ‌ಸಿ ಇದ್ದು, ಶುಕ್ರವಾರ ಸಾಯಂಕಾಲ 5.20 ಗಂಟೆ ಹೊತ್ತಿಗೆ 2.95 ಟಿಎಂಸಿ ನೀರು ಸಂಗ್ರಹಗೊಂಡಿದೆ ಎಂದರು. ಜುಲೈ ಮಾಸಾಂತ್ಯ ಮತ್ತು ಅಗಸ್ಟ್ ಮಾಹೆಯಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು, ಆಗ ನೀರಿನ ಒಳಹರಿವು ಇನ್ನೂ ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು 15,000 ಕ್ಯೂಸೆಕ್‌ ನೀರು ನದಿಗೆ ಹರಿಸಲಾಗಿದೆ ಎಂದು ಅಶೋಕ್‌ ಆರ್‌ ಕಲಾಲ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.