ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ರುದ್ರನರ್ತನ ಮುಂದುವರೆದಿದೆ. ಎರಡನೇ ದಿನವೂ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಇದರೊಂದಿಗೆ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ ಮೊದಲ ಸ್ಥಾನಕ್ಕೇರಿದೆ. ನಿನ್ನೆ ಬರೋಬ್ಬರಿ 100 ಜನರಿಗೆ ಸೋಂಕು ದೃಢಪಟ್ಟಿತ್ತು. ಇಂದು ಇದನ್ನು ಮೀರಿಸಿ 105 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
![105 new coronavirus cases reported in Kalaburagi](https://etvbharatimages.akamaized.net/etvbharat/prod-images/kn-klb-04-hundred-five-positive-cases-7208086_03062020224557_0306f_1591204557_735.png)
ಎಲ್ಲ 105 ಸೋಂಕಿತರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ಈ ಪೈಕಿ 30 ಮಕ್ಕಳು, 25 ಮಹಿಳೆಯರು, 50 ಪುರುಷರಿದ್ದಾರೆ. ಚಿತ್ತಾಪುರ ತಾಲೂಕಿನ 46 ಜನ, ಚಿಂಚೋಳಿ ತಾಲೂಕಿನ 54, ಕಲಬುರಗಿ ಗ್ರಾಮೀಣ 1, ಸೇಡಂ ತಾಲೂಕಿನ 3 ಜನ ಹಾಗೂ ಕಲಬುರಗಿಯ ಬಾಪುನಗರನಲ್ಲಿ ಓರ್ವರಾಗಿದ್ದಾರೆ. ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದೆ. ಇವರಲ್ಲಿ 7 ಜನ ಮೃತಪಟ್ಟಿದ್ದಾರೆ. 128 ಗುಣಮುಖರಾಗಿ ಮನೆಗೆ ಮರಳಿದ್ದಾರೆ. 375 ಆ್ಯಕ್ಟಿವ್ ಪ್ರಕರಣಗಳಿವೆ.
![105 new coronavirus cases reported in Kalaburagi](https://etvbharatimages.akamaized.net/etvbharat/prod-images/kn-klb-04-hundred-five-positive-cases-7208086_03062020224557_0306f_1591204557_118.png)