ETV Bharat / state

ಮುಂದಿನ ಸಿಎಂ ಸಿದ್ದರಾಮಯ್ಯ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ: ಜಮೀರ್ ಅಹ್ಮದ್​ - ಹಾವೇರಿಯಲ್ಲಿ ಮಾಜಿ ಸಚಿವ ಜಮೀರ್​ ಅಹ್ಮದ್​​ಖಾನ್

ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನುವ ಬಗ್ಗೆ ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ ಆಚರಿಸಲು ಮುಂದಾದರೆ ನಾವೆಲ್ಲ ಸೇರಿ ಇದೇ ರೀತಿ ಆಚರಿಸುತ್ತೇವೆ-ಶಾಸಕ ಜಮೀರ್ ಅಹ್ಮದ್​ ಖಾನ್​

ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ :  ಜಮೀರ್

author img

By

Published : Jul 25, 2022, 3:52 PM IST

ಹಾವೇರಿ : ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸಚಿವ ಜಮೀರ್ ಅಹ್ಮದ್​​ ಖಾನ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಸೋನಿಯಾ‌ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ನಾಯಕರು. ಅವರು ಯಾರು ಮುಖ್ಯಮಂತ್ರಿ ಅನ್ನೋದನ್ನು ತೀರ್ಮಾನ ಮಾಡ್ತಾರೆ. ಅವರು ಹಾಕಿದ ಗೆರೆಯನ್ನು ನಾವು ದಾಟೋದಿಲ್ಲ ಎಂದು ಹೇಳಿದರು.

ನನ್ನ ಅಭಿಪ್ರಾಯವನ್ನು ನಾನು ಹೇಳಿಬಿಟ್ಟಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬ ಆಚರಿಸಲು ಮುಂದಾದರೆ ನಾವೆಲ್ಲ ಸೇರಿ ಇದೇ ರೀತಿ ಮಾಡ್ತೀವಿ. ಅಭಿಮಾನಿಗಳ ಒತ್ತಡದಿಂದ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಮಾಡ್ತಿದ್ದೇವೆ. ರಾಹುಲ್ ಗಾಂಧಿ, ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್​, ಡಾ. ಜಿ.ಪರಮೇಶ್ವರ್​​, ಎಂ.ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್​​​ನ ಎಲ್ಲ ನಾಯಕರು ಬರ್ತಿದ್ದಾರೆ ಎಂದು ವಿವರಿಸಿದರು.

ಹಾವೇರಿ ಕಾಂಗ್ರೆಸ್​​ನ ಭದ್ರಕೋಟೆ. ಎಲ್ಲಿ ಹೋದರೂ ಜನರು ಸಂತಸಪಡುತ್ತಿದ್ದಾರೆ. ಸಿದ್ದರಾಮಯ್ಯ ಎಂದೂ ಸಹ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ದೆಹಲಿಗೆ ಹೋಗಿದ್ದಾಗ ಸಿದ್ದರಾಮಯ್ಯಗೆ ಸಾಕಷ್ಟು ಫೋನ್ ಬಂದಿದ್ದವು. ಜನರ ಒತ್ತಡ ಜಾಸ್ತಿಯಾದಾಗ ಅವರು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕು ಅಂತಾ ನಾನು ಓಡಾಡ್ತಿದ್ದೀನಿ. ಅಲ್ಪಸಂಖ್ಯಾತರು ಸಿದ್ದರಾಮಯ್ಯರ ಋಣ ತೀರಿಸಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾಲದಲ್ಲಿ ಸಾಕಷ್ಟು ಹಣ ಕೊಟ್ಟಿದ್ದಾರೆ. ಹಿಂದಿನ ಯಾವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯ ಕೊಟ್ಟಷ್ಟು ಹಣ ಕೊಟ್ಟಿಲ್ಲ ಎಂದು ಶಾಸಕ ಜಮೀರ್​ ಅಹ್ಮದ್​ ಖಾನ್​ ಹೊಗಳಿದರು.

ಇದನ್ನೂ ಓದಿ: ನನ್ನ ಬಾಯಿ ಮುಚ್ಚೋದು ಸತ್ತ ಮೇಲೆನೆ.. ಡಿಕೆಶಿಗೆ ಜಮೀರ್ ಅಹ್ಮದ್ ಖಾನ್ ಟಾಂಗ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.