ETV Bharat / state

ಪ್ರೇತಾತ್ಮಗಳು ಮೈಮೇಲೆ ಬರ್ತವೆ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವಕ! - ತನಗೆ ಮಾಟ ಮಾಡಿಸಿದ್ದಾರೆ ಎಂದ ಯುವಕ

ವೀರಯ್ಯ ಹಿರೇಮಠಗೆ ಯಾರೋ ವಾಮಾಚಾರ ಮಾಡಿಸಿದ್ದಾರಂತೆ. ಹೀಗಾಗಿ ತನಗೆ ರಾತ್ರಿಯೆಲ್ಲ ನಿದ್ದೆಯಿಲ್ಲ. ಮೈ-ಕೈ, ಕಾಲುಗಳೆಲ್ಲಾ ನೋವು ಕಾಣಿಸಿಕೊಳ್ಳುತ್ತೆ. ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಅಂತ ಆಡೂರು ಪೊಲೀಸ್ ಠಾಣೆಯ ಪಿಎಸ್ಐ ಗೆ ವೀರಯ್ಯ ಪತ್ರ ಬರೆದಿದ್ದಾನೆ.

ಯಾರೋ ಮಾಟ ಮಾಡಿಸಿದ್ದಾರೆಂದು ಪೊಲೀಸರಿಗೆ ಪತ್ರ ಬರೆದ ಯುವಕ

author img

By

Published : Apr 6, 2022, 9:40 PM IST

Updated : Apr 6, 2022, 10:29 PM IST

ಹಾವೇರಿ: ವಿವಿಧ ಕಾರಣಗಳಿಗಾಗಿ ಸಾರ್ವಜನಿಕರು ಪೊಲೀಸ್ ಮೆಟ್ಟಿಲೇರುತ್ತಾರೆ. ವಸ್ತುಗಳ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಇನ್ನೂ ಕೆಲವರು ತಮ್ಮ ಪ್ರಾಣಿಗಳು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಕೆಲವರು ಜೀವಬೆದರಿಕೆ, ತಂಟೆ, ತಕರಾರುಗಳಿಗೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ವಿಭಿನ್ನ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ವಿಭಿನ್ನ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವಕನ ಹೆಸರು ವೀರಯ್ಯ ಹಿರೇಮಠ. 30 ವರ್ಷದ ವೀರಯ್ಯ ಹಿರೇಮಠ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಯುವಕ. ಪಿಯುಸಿ ಓದಿಕೊಂಡಿರುವ ವೀರಯ್ಯ ಹಿರೇಮಠಗೆ ಯಾರೋ ವಾಮಾಚಾರ ಮಾಡಿಸಿದ್ದಾರಂತೆ. ಹೀಗಾಗಿ ತನಗೆ ರಾತ್ರಿಯೆಲ್ಲ ನಿದ್ದೆಯಿಲ್ಲ. ಮೈ-ಕೈ, ಕಾಲುಗಳ ನೋವು ಕಾಣಿಸಿಕೊಳ್ಳುತ್ತೆ. ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಅಂತಾ ಆಡೂರು ಪೊಲೀಸ್ ಠಾಣೆಯ ಪಿಎಸ್ಐಗೆ ವೀರಯ್ಯ ಪತ್ರ ಬರೆದಿದ್ದಾನೆ. ತನಗೆ ಯಾರು ವಾಮಾಚಾರ ಮಾಡಿಸಿದ್ದು, ಅವರನ್ನ ಹಿಡಿದು ಶಿಕ್ಷಿಸುವಂತೆ ವೀರಯ್ಯ ಮನವಿ ಮಾಡಿದ್ದಾನೆ.

ವೈದ್ಯರಿಂದ ಗುಣಮುಖವಾಗಲಿಲ್ಲವಂತೆ: ವೀರಯ್ಯ ತನ್ನ ಸಮಸ್ಯೆಗಳ ಕುರಿತಂತೆ ಹಾವೇರಿ,ಶಿಗ್ಗಾವಿ,ಮಣಿಪಾಲ ಹುಬ್ಬಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ್ದಾನೆ. ಅಲ್ಲಿ ಎಲ್ಲಾ ರೀತಿಯ ಪರೀಕ್ಷೆ ಮಾಡಿರುವ ವೈದ್ಯರು ಆತನಿಗೆ ಏನೂ ಆಗಿಲ್ಲ ಇದೆ ಎಂದು ತಿಳಿಸಿದ್ದಾರೆ. ನರರೋಗ ವೈದ್ಯರು ಸಹ ವೀರಯ್ಯ ಆರೋಗ್ಯದಿಂದ ಇದ್ದಾನೆ ಎಂದು ತಿಳಿಸಿದ್ದಾರೆ. ವೈದ್ಯರಿಂದ ಗುಣಮುಖವಾಗದ ಹಿನ್ನೆಲೆ ಪೋಷಕರು ವೀರಯ್ಯನನ್ನ ಜ್ಯೋತಿಷಿಗಳ ಹತ್ತಿರ ಕರೆದುಕೊಂಡು ಹೋಗಿದ್ದರಂತೆ. ಅವರ ಹತ್ತಿರ ತೋರಿಸಿದ ನಂತರ ಪ್ರೇತಾತ್ಮಗಳ ಕಾಟ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾನೆ ವೀರಯ್ಯ.

ವೀರಯ್ಯನಈ ವರ್ತನೆ ಕುರಿತಂತೆ ಮಾನಸಿಕ ವೈದ್ಯರನ್ನ ಕೇಳಿದರೆ, ವೀರಯ್ಯನ ಲಕ್ಷಣಗಳನ್ನು ನೋಡಿದರೆ ಆತ ಭ್ರಮೆಗೆ ಒಳಗಾಗಿದ್ದಾನೆ. ಇದನ್ನು ಸ್ಕಿಜೋಪೇನಿಯಾ ಎಂದು ಕರೆಯಲಾಗುತ್ತದೆ. ಇದೊಂದು ಧೀರ್ಘಕಾಲದ ಮನೋರೋಗವಾಗಿದ್ದು, ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.

Last Updated : Apr 6, 2022, 10:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.