ಹಾವೇರಿ: ಯುವತಿ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದಲ್ಲಿ ನಡೆದಿದೆ.
ಪ್ರಸನ್ನ ಲಮಾಣಿ (20) ಮೃತ ಯುವಕ. ಕಳೆದ ಒಂದು ವರ್ಷದ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಪ್ರಸನ್ನ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದ ಬಳಿಕ ಯುವತಿಯನ್ನ ಮದುವೆಯಾಗು ಎಂದು ಯುವತಿ ಹಾಗೂ ಆಕೆಯ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಪ್ರಸನ್ನ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಓದಿ: ದಾವಣಗೆರೆಯಲ್ಲಿ ಸಂಕ್ರಾಂತಿಯಂದೇ ಭೀಕರ ರಸ್ತೆ ಅಪಘಾತ.. ಮದ್ಯ ಸೇವಿಸಿ ನಿದ್ರೆಗೆ ಜಾರಿದ ಚಾಲಕ, ಏಳು ಜನರ ದುರ್ಮರಣ
ಯುವತಿಯನ್ನ ಮದುವೆಯಾಗು, ಆಕೆಯನ್ನ ಕರೆದುಕೊಂಡು ಹೋಗದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತಾ ಯುವತಿ ಮನೆಯವರು ಪ್ರಸನ್ನನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಮನನೊಂದ ಯುವಕ, ತನ್ನ ಸಾವಿಗೆ ಯುವತಿಯೇ ಕಾರಣ ಎಂದು ವಾಟ್ಸ್ ಆ್ಯಪ್ನಲ್ಲಿ ಸ್ಟೇಟಸ್ ಹಾಕಿ, ಯುವತಿಯ ಹೆಸರು ಮತ್ತು ಆಕೆಯೊಂದಿಗೆ ಓಡಾಡಿದ್ದ ಫೋಟೋಗಳನ್ನಿಟ್ಟು ನಿನ್ನೆ ಸಂಜೆ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತನನ್ನು ಮಾಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಯುವಕನ ತಂದೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಆಕೆಯ ವಿರುದ್ಧ ದೂರು ನೀಡಿದ್ದಾರೆ.
ಓದಿ: ಮೀನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಪಲ್ಟಿ: ಸ್ಥಳದಲ್ಲೇ ನಾಲ್ವರ ಸಾವು, ಹತ್ತು ಮಂದಿ ಸ್ಥಿತಿ ಗಂಭೀರ