ಹಾವೇರಿ: ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿದ್ದ ಡಾ.ಶಾಂತ ಎಂಬುವರಿಂದ ಗರ್ಭಕೋಶ ಕಳೆದುಕೊಂಡ ಮಹಿಳೆಯರು ನಡೆಸುತ್ತಿದ್ದ 'ಸಿಎಂ ಮನೆಗೆ ಪಾದಯಾತ್ರೆ'ಯು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜಿಲ್ಲಾಡಳಿತದಿಂದ ನೆರವು ಮತ್ತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸುವ ಕುರಿತು ಆಶ್ವಾಸನೆ ನೀಡಿದ ಬಳಿಕ ಹೋರಾಟ ಹಿಂಪಡೆಯಲಾಗಿದೆ.
ಏಪ್ರಿಲ್ 28 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಗೆ ಭೇಟಿ ನೀಡಲಿದ್ದು, ಈ ವೇಳೆ ಅವರನ್ನು ಸಂತ್ರಸ್ತ ಮಹಿಳೆಯರು ಭೇಟಿ ಮಾಡುವ ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಹೀಗಾಗಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ ಎಂದು ಹೋರಾಟದ ನೇತೃತ್ವ ವಹಿಸಿದ ನಾಯಕರು ತಿಳಿಸಿದ್ದಾರೆ.
ಕಣ್ಣೀರು ಹಾಕಿದ ಮಹಿಳೆಯರು: ಪಾದಯಾತ್ರೆ ಹಿಂತೆಗೆತದ ಬಳಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕುವ ಮೂಲಕ ತಮಗಾದ ಅನ್ಯಾಯವನ್ನು ಹೊರಹಾಕಿದಳು. ಗರ್ಭಕೋಶ ಶಸ್ತ್ರಚಿಕಿತ್ಸೆಯ ಬಳಿಕ ತಮಗೆ ಆಗುತ್ತಿರುವ ತೊಂದರೆ ನೆನೆದು ಕಣ್ಣೀರಾದರು. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರನ್ನ ಪೊಲೀಸ್ ವಾಹನಗಳಲ್ಲಿ ಅವರ ಊರುಗಳಿಗೆ ಕಳುಹಿಸಿಕೊಡಲಾಯಿತು.
ಓದಿ: ಗರ್ಭಕೋಶ ಕತ್ತರಿ: ಸಂತ್ರಸ್ತ ಮಹಿಳೆಯರಿಂದ ಬೊಮ್ಮಾಯಿ ಮನೆಗೆ ಪಾದಯಾತ್ರೆ