ETV Bharat / state

ಹಾನಗಲ್​​​​: ವಿಡಿಯೋ ಕಾಲ್​​​ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಮಹಿಳೆಯರು!

ಹಾನಗಲ್ ಪಟ್ಟಣದ ಕಿತ್ತೂರು ಚೆನ್ನಮ್ಮ ಓಣಿಯ ಮಹಿಳೆಯರು ಹುಬ್ಬಳ್ಳಿ ಕಿಮ್ಸ್​​​ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಪ್ರಿಯಾಂಕ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ.

Hanagal
ವಾಟ್ಸಪ್ ವಿಡಿಯೋ ಕಾಲ್ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಮಹಿಳೆಯರು..
author img

By

Published : Jul 28, 2020, 12:23 PM IST

ಹಾನಗಲ್: ಭಾನುವಾರದ ಲಾಕ್​​ಡೌನ್ ಹಿನ್ನೆಲೆ ಇಡೀ ಪಟ್ಟಣವೆ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಹಾನಗಲ್ ಪಟ್ಟಣದ ಕಿತ್ತೂರು ಚೆನ್ನಮ್ಮ ಓಣಿಯ ಮಹಿಳೆಯರು ಸೇರಿಕೊಂಡು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ.

Hanagal
ವಿಡಿಯೋ ಕಾಲ್ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಮಹಿಳೆಯರು..

ಭಾನುವಾರ ಮದ್ಯಾಹ್ನ 2:30ರ ಸುಮಾರಿಗೆ ಪತ್ತೆಪೂರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮಹಿಳೆಯ ಆಕ್ರಂದನ ಮತ್ತು ಕಿರುಚುವುದನ್ನ ಕಂಡ ಸ್ಥಳೀಯ ಮಹಿಳೆಯರು ಸಹಾಯಕ್ಕೆ ಧಾವಿಸಿದ್ದಾರೆ. ಆಗಲೇ ಮುಗು ಅರ್ಧ ಹೊರ ಬಂದು ಕಣ್ಣು ತೆರೆದಿತ್ತು. ಸಮಯಪ್ರಜ್ಞೆ ಮೆರೆದ ಮಹಿಳೆಯರು, ಹುಬ್ಬಳ್ಳಿ ಕಿಮ್ಸ್​​​​ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಪ್ರಿಯಾಂಕ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ.

ಶಸ್ತ್ರ ಚಿಕಿತ್ಸೆಯಲ್ಲಿದ್ದ ಡಾ. ಪ್ರಿಯಾಂಕ ಮಹಿಳೆಯರಿಗೆ ಮಾರ್ಗದರ್ಶನ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಲಾಕ್​​ಡೌನ್ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳು ಬಂದ್ ಇರುವ ಕಾರಣ ಮಹಿಳೆಯರು ಮನೆಯಲ್ಲೇ ವೈದ್ಯರ ಸಲಹೆಯಂತೆ ಹೆರಿಗೆ ಮಾಡಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಇದೀಗ ಮಗು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.