ಹಾವೇರಿ: ಮದುವೆಯಾಗು ಎಂದು ದುಂಬಾಲು ಬಿದ್ದಿದ್ದ ಪ್ರೇಯಸಿಯ ಜೀವವನ್ನು ಪ್ರಿಯಕರ ಕೊನೆಗಾಣಿಸಿರುವ ಘಟನೆ ಜಿಲ್ಲೆಗೆ ಸಮೀಪದ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಕರ್ಜಗಿ ಗ್ರಾಮದ ಹೊರವಲಯದಲ್ಲಿರುವ ರೇಷ್ಮೆ ಇಲಾಖೆಯ ಹಳೆಯ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಯುವತಿಯನ್ನ 21 ವರ್ಷದ ಶಿಲ್ಪಾ ಎಂದು ಗುರುತಿಸಲಾಗಿದೆ. ಕರಿಬಸವ (28 ವರ್ಷ) ಎಂಬಾತ ಯುವತಿಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆಮಾಡಿರುವ ಆರೋಪಿ.
ನಿನ್ನೆ (ಬುಧವಾರ) ಯುವತಿಯನ್ನ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಬಂದಿದ್ದ ಕರಿಬಸವ ತನ್ನ ಪ್ರೇಯಸಿಯನ್ನ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಓದಿ: ಸ್ಮಶಾನದ ಸಿಬ್ಬಂದಿಗೆ ಕೊರೊನಾ ಭಯ : ಮೃತದೇಹಗಳನ್ನ ಮಣ್ಣು ಮಾಡಲ್ಲ ಎಂದು ಹಠ ಹಿಡಿದ ನೌಕರರು