ETV Bharat / state

ಹಾವೇರಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ - ನಾಪತ್ತೆಯಾದವರ ಪ್ರಕರಣ

ಮೃತ ವ್ಯಕ್ತಿಯ ಪತ್ನಿ ಜೊತೆಗಿದ್ದ ಅಕ್ರಮ ಸಂಬಂಧಕ್ಕೆ ಅಡ್ಡ ಬರುತ್ತಿದ್ದ ಗಂಡನನ್ನೇ ಆರೋಪಿ ಕೊಲೆ ಮಾಡಿದ್ದು, ಇದಕ್ಕೆ ಪತ್ನಿಯೂ ಕೈ ಜೋಡಿಸಿದ್ದಾಳೆ.

deid person Sakrappa
ಮೃತ ವ್ಯಕ್ತಿ ಸಕ್ರಪ್ಪ
author img

By

Published : Nov 5, 2022, 6:25 PM IST

ಹಾವೇರಿ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರದಲ್ಲಿ ನಡೆದಿದೆ. ಕೊಲೆಯಾದ ಪತಿಯನ್ನು 40 ವರ್ಷದ ಸಕ್ರಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಸುರೇಶ ಎಂದು ಗುರುತಿಸಲಾಗಿದ್ದು, ಸಕ್ರಪ್ಪ ಪತ್ನಿ ಶೀಲವ್ವ ಮತ್ತು ಏಳು ಜನ ಆರೋಪಿಗಳು ಸೇರಿಕೊಂಡು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಆಗಸ್ಟ್ 25 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹಳ್ಳದ ಬಳಿ ಸುಟ್ಟ ಸ್ಥಿತಿಯಲ್ಲಿ ಒಂದು ಶವ ಪತ್ತೆಯಾಗಿತ್ತು. ಕೇವಲ ಕಾಲುಗಳು ಮಾತ್ರ ಇದ್ದು ದೇಹದ ಉಳಿದ ಬಾಗಗಳನ್ನು ಸುಟ್ಟು ಹಾಕಲಾಗಿತ್ತು. ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸರು ಈ ಕುರಿತಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಕೊಲೆಯಾದ ವ್ಯಕ್ತಿ ಬಗ್ಗೆ ಕೊಲೆ ಮಾಡಿದ ಆರೋಪಿಗಳ ಬಗ್ಗೆ ಪತ್ತೆಯಾಗಿರಲಿಲ್ಲ.

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

ಇದೇ ವೇಳೆ ನಾಪತ್ತೆಯಾದವರ ಪ್ರಕರಣಗಳ ಕುರಿತಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಈ ಸಂದರ್ಭ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ಸಕ್ರಪ್ಪ ಲಮಾಣಿ ಹೆಸರು ಸಹ ನಾಪತ್ತೆಯಾದವರು ಪಟ್ಟಿಯಲ್ಲಿತ್ತು. ಇದರ ಜಾಡು ಹಿಡಿದ ಪೊಲೀಸರಿಗೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಸುರೇಶ್ ಮಿರ್ಜಿ ಅಲಿಯಾಸ್ ಲಮಾಣಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಮೃತ ಸಕ್ರಪ್ಪನ ಪತ್ನಿ ಮತ್ತು ಸುರೇಶ ನಡುವೆ ಅನೈತಿಕ ಸಂಬಂಧವಿತ್ತು. ಈ ಸಂಬಂಧಕ್ಕೆ ಸಕ್ರಪ್ಪ ಪದೇ ಪದೆ ತೊಂದರೆ ತರುತ್ತಿದ್ದರಿಂದ ಬೇಸತ್ತ ಸುರೇಶ್ ಸಕ್ರಪ್ಪನ ಕೊಲೆ ಮಾಡಿದ್ದಾನೆ. ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಡಾಬಾದಲ್ಲಿ ಆರೋಪಿಗಳು ಊಟ ಮಾಡಿ ಮದ್ಯಸೇವನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಸುರೇಶ ಕೊಡಲಿಯಿಂದ ಹೊಡೆದು ಸಕ್ರಪ್ಪನ ಕೊಲೆ ಮಾಡಿದ್ದಾನೆ.

acused
ಆರೋಪಿಗಳು

ನಂತರ ಸಕ್ರಪ್ಪನ ಶವ ತಂದು ಗ್ರಾಮದ ಪಕ್ಕದಲ್ಲಿರುವ ಕಾಲುವೆ ಬಳಿ ಎಸೆದುಹೋಗಿದ್ದಾರೆ. ಮರು ದಿನ ಏಳು ಜನ ಆರೋಪಿಗಳು ಸೇರಿಕೊಂಡು ದೇಹವನ್ನು ಟೈರ್ ಸುತ್ತಿ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ. ಆದರೆ ಕಾಲುಗಳು ಸುಟ್ಟಿರದ ಕಾರಣ ಕಾಲಿನಲ್ಲಿದ್ದ ಗಾಯದ ಗುರುತಿಸಿ ಸಕ್ರಪ್ಪ ಸಂಬಂಧಿಗಳು ದೇಹ ಖಚಿತಪಡಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ತೆಯಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಮೃತ ವ್ಯಕ್ತಿಯ ಕಾಲುಗಳು ಮತ್ತು ಪ್ಯಾಂಟ್​ ಭಾಗ ಮಾತ್ರ ಕಾಣುತ್ತಿತ್ತು. ಅಂತಹ ಸಂದರ್ಭದಲ್ಲಿ ನಾವು ತಡಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಶಿಗ್ಗಾಂವಿ​ ಇನ್​ಸ್ಪೆಕ್ಟರ್​ ಪ್ರಕರಣವನ್ನು ತನಿಖೆ ಮಾಡಿದ್ದಾರೆ. ಇಲ್ಲಿ ಸಾಕ್ಷಿಗಳು ಕೂಡ ನಾಶವಾಗಿತ್ತು. ನಮ್ಮ ತಂಡ ರಚಿಸಿ ಸುಮಾರು ಎರಡು ತಿಂಗಳುಗಳಿಂದ ತನಿಖೆ ನಡೆಸುತ್ತಿದ್ದೇವೆ. ಕೊನೆಗೆ ನಾಪತ್ತೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿದ್ದು, ಅದರ ಜಾಡು ಹಿಡಿದು ತನಿಖೆ ಮಾಡಿದಾಗ ಸತ್ಯ ಬಯಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಶಂಕೆ: ಹೆಂಡತಿ ಕೊಂದ ಗಂಡ ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.