ರಾಣೆಬೆನ್ನೂರ: ನಗರದ ಕೆ.ಹೆಚ್.ಬಿ ಕಾಲೋನಿ ನಿವಾಸಿಯಾದ ನವೀನಕುಮಾರ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಪತ್ನಿ ಪೊಲೀಸರ ಮೊರೆ ಹೋದ ಘಟನೆ ರಾಣೆಬೆನ್ನೂರ ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಕಾರ್ ಚಾಲಕನಾಗಿದ್ದ ನವೀನ ಕುಮಾರ ಕರಬಸಪ್ಪ ಮಾಕನೂರು(27) ಎಂಬುವವರು ನಾಪತ್ತೆಯಾಗಿದ್ದಾರೆ. ಜನವರಿ 11ರಂದು ಕಾರ್ ಬಾಡಿಗೆಗೆ ತೆರಳಿದವರು ವಾಪಾಸ್ಸಾಗಿಲ್ಲ. ಯಾವುದೇ ಕರೆಗಳಿಗೂ ಸಿಗುತ್ತಿಲ್ಲ. ಹೀಗಾಗಿ ಹುಡುಕಿಕೊಡುವಂತೆ ಪತ್ನಿ ಪೂಜಾ ದೂರು ದಾಖಲಿಸಿದ್ದಾರೆ.
ನಗರದ ಕೆ.ಹೆಚ್.ಬಿ.ಕಾಲೋನಿ ನಿವಾಸಿಗಳಾದ ದಂಪತಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿ 15 ದಿನ ಕಳೆದರು ಶಹರ ಪೊಲೀಸರು ಕಾಣೆಯಾದ ಪತಿಯ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ ಎಂದು ಪೂಜಾ ಕಣ್ಣಿರು ಹಾಕುತ್ತಿದ್ದಾರೆ.