ETV Bharat / state

ಪತ್ನಿ, ಮಗು ನಾಪತ್ತೆ... ಪ್ರಕರಣ ದಾಖಲಾಗಿ 44 ದಿನಗಳಾದರೂ ಸಿಗದ ಸುಳಿವು: ಪತಿಯ ಆತಂಕ!

author img

By

Published : Mar 9, 2021, 11:06 AM IST

ಕಳೆದ ಕೆಲ ದಿನಗಳ ಹಿಂದೆ ರಟ್ಟಿಹಳ್ಳಿಯಿಂದ ರಾಣೆಬೆನ್ನೂರಿಗೆ ಬರುವುದಾಗಿ ತಿಳಿಸಿದ್ದ ಬೀಬಿ ಫಾತಿಮಾ ತನ್ನ ಮಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪತಿ ಅಮ್ಜದ ಖಾನ್ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

haveri
ಅಮ್ಜದ ಖಾನ್ ಮತ್ತು ಬೀಬಿ ಫಾತಿಮಾ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಿವಾಸಿ ಅಮ್ಜದ ಖಾನ್ ರಟ್ಟಿಹಳ್ಳಿಯ ಬೀಬಿ ಫಾತಿಮಾರನ್ನ ಕಳೆದ 3 ವರ್ಷದಿಂದ ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲದೆ 2018ರಲ್ಲಿ ಯುವತಿ ಜೊತೆ ವಿವಾಹವಾಗಿದ್ದ. ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಇದೆ. ಆದರೆ, ಕಳೆದ ಕೆಲ ದಿನಗಳ ಹಿಂದೆ ರಟ್ಟಿಹಳ್ಳಿಯಿಂದ ರಾಣೆಬೆನ್ನೂರಿಗೆ ಬರುವುದಾಗಿ ತಿಳಿಸಿದ್ದ ಬೀಬಿ ಫಾತೀಮಾ ತನ್ನ ಮಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪತಿ ಅಮ್ಜದ ಖಾನ್ ರಾಣೆಬೆನ್ನೂರು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

ಪತ್ನಿ,ಮಗು ನಾಪತ್ತೆ..

ರಾಣೆಬೆನ್ನೂರಿನ ಅಮ್ಜದ ಖಾನ್ ಮತ್ತು ರಟ್ಟಿಹಳ್ಳಿಯ ಬೀಬಿ ಫಾತಿಮಾ ಮನೆಯವರ ವಿರೋಧದ ನಡುವೆಯೇ 2018ರಲ್ಲಿ ವಿವಾಹವಾಗಿದ್ದರು. ಮನೆಯವರ ವಿರೋಧವಿದ್ದ ಕಾರಣ ಮದುವೆ ನೋಂದಣಿ ಕೂಡ ಮಾಡಿಸಿಕೊಂಡಿದ್ದರು. ನಂತರ ಅಮ್ಜದ ಖಾನ್ ಮತ್ತು ಬೀಬಿ ಫಾತಿಮಾ ರಾಣೆಬೆನ್ನೂರಿನಲ್ಲಿ ಒಂದು ವರ್ಷ ವಾಸವಿದ್ದರು. ಬೀಬಿ ಫಾತಿಮಾ ಗರ್ಭಿಣಿಯಾಗುತ್ತಿದ್ದಂತೆ ತವರು ಮನೆ ರಟ್ಟಿಹಳ್ಳಿಗೆ ಹೋಗಿದ್ದಳು. ಇಬ್ಬರ ಪ್ರೀತಿಯ ಪ್ರತೀಕವಾಗಿ ಬೀಬಿ ಫಾತಿಮಾಗೆ ಹೆಣ್ಣು ಮಗು ಜನಿಸಿತ್ತು. ತಿಂಗಳಿಗೊಮ್ಮೆ ಅಮ್ಜದ ಖಾನ್‌ ಪತ್ನಿಯ ಮನೆಗೆ ಹೋಗಿ ಬರುತ್ತಿದ್ದ. ಆದರೆ, ಜ.22 ರಂದು ತವರು ಮನೆಯಲ್ಲಿ ರಾಣೆಬೆನ್ನೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದ ಬೀಬಿ ಫಾತಿಮಾ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.

haveri
ವಿವಾಹ ನೋಂದಣಿ ಪ್ರತಿ

ಬೀಬಿ ಫಾತಿಮಾ ಜ.22 ರಂದು ರಾಣೆಬೆನ್ನೂರಿಗೆ ಹೋಗುವುದಾಗಿ ತಿಳಿಸಿದ್ದಳಂತೆ. ಈ ವಿಷಯವನ್ನ ಆಕೆಯ ಮನೆಯವರು ಅಮ್ಜದ ಖಾನ್‌ಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರಂತೆ. ಅದರಂತೆ ಅಮ್ಜದ ಖಾನ್ ಮತ್ತು ಆತನ ಸ್ನೇಹಿತರು ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಬೀಬಿ ಫಾತಿಮಾಳನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ. ಆದರೆ, ಆಕೆ ಮತ್ತು ಮಗು ಬಾರದ ಕಾರಣ ಅಮ್ಜದ ಖಾನ್ ಮತ್ತು ಆತನ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಆದರೂ ಸಹ ಪತ್ತೆಯಾಗದ ಕಾರಣ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

haveri
ದೂರು ಪ್ರತಿ

ಆದರೆ, ಪ್ರಕರಣ ದಾಖಲಾಗಿ 44 ದಿನಗಳಾದರೂ ತಾಯಿ ಮತ್ತು ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪತ್ನಿ ಮತ್ತು ಮಗುವನ್ನು ಹುಡುಕಿಕೊಡುವಂತೆ ಅಮ್ಜದಖಾನ್ ಮತ್ತು ಸ್ನೇಹಿತರು ಪೊಲೀಸರಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ತಾಯಿಯ ಮನೆಯಿಂದ ಪತಿ ಮನಗೆ ಹೋಗುವುದಾಗಿ ತಿಳಿಸಿದ್ದ ಬೀಬಿ ಫಾತಿಮಾ ನಾಪತ್ತೆಯಾಗಿರುವುದು ಅಮ್ಜದ ಖಾನ್​ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.