ಹಾವೇರಿ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅರ್ಧದಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಾಳ ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇದಾಗಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಅರ್ಧದಲ್ಲೇ ಬಸವನಾಳ ಗ್ರಾಮದ ಆಟದ ಮೈದಾನದಲ್ಲಿ ಲ್ಯಾಂಡ್ ಆಗಿದೆ.
ಪ್ರಾಣಾಪಾಯದಿಂದ ಶಾಸಕ ಭೈರತಿ ಸುರೇಶ್ ಪಾರಾಗಿದ್ದು, ಹೆಲಿಕಾಪ್ಟರ್ ನೋಡಲು ಜನರು ಜಮಾಯಿಸಿದ ದೃಶ್ಯ ಕಂಡುಬಂದಿತು.