ಹಾವೇರಿ : ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶಕ್ಕೆ ಜೈಕಾರ ಹಾಕುವುದು ಅಂದ್ರೇ ಸ್ವಂತ ತಂದೆ-ತಾಯಿ ಬಿಟ್ಟು ಬೇರೆಯವರ ತಂದೆ-ತಾಯಿಗೆ ಜೈಕಾರ ಹಾಕಿದಂತೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೊದಲು ನಮ್ಮ ದೇಶದ ಬಗ್ಗೆ ನಮಗೆ ಗೌರವವಿರಬೇಕು. ಅದು ಬಿಟ್ಟು ಪಾಕಿಸ್ತಾನದ ಬಗ್ಗೆ ಯಾಕೆ ಮಾತನಾಡಬೇಕು. ನಮ್ಮ ದೇಶ ಶಾಂತಿ-ಸೌಹಾರ್ದತೆಯ ದೇಶ. ನಾವೆಲ್ಲರೂ ಶಾಂತಿ ನೆಲೆಸುವ ರೀತಿಯಲ್ಲಿ ಸಂವಿಧಾನಕ್ಕೆ ಬದ್ದವಾಗಿರಬೇಕು ಎಂದರು.
ಇದೇ ವೇಳೆ ದೇಶದ್ರೋಹಿಗಳ ಪರ ವಕಾಲತ್ತು ಮಾಡುವ ವಕೀಲರ ಬಗ್ಗೆ ಮಾತನಾಡಿದ ಅವರು, ವಕೀಲರು ವೃತ್ತಿಪರ ಕೆಲಸ ಮಾಡಬೇಕು. ನಿಜವಾದ ವಕೀಲರು ಅಸತ್ಯವನ್ನ ಸತ್ಯ ಮಾಡಲು ಹೋಗಬಾರದು ಎಂದು ಹಿರೇಮಠ ತಿಳಿಸಿದರು.
ಕಾಂಗ್ರೆಸ್ ಕೊಳಕುತನದಿಂದಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಹಾಳಾಗಿವೆ. ಮೂರನೆಯ ಶಕ್ತಿ ಬರುತ್ತದಾ ಎಂಬುದನ್ನು ಕಾದು ನೋಡಬೇಕು ಎಂದರು.