ETV Bharat / state

ಮಳೆನೀರು ಹರಿಯುವ ಮಾರ್ಗ ಸರಿಪಡಿಸದಿದ್ರೆ ಕೇಸ್​: ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ - haveri news

ಕಳೆದ ಎರಡು ವರ್ಷದಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಯಾರೋ ಹೆದರಿಸುತ್ತಾರೆ ಎಂದು ತಾವುಗಳು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದೀರಿ. ಇದನ್ನು ಸರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ತಾಕೀತು ಮಾಡಿದರು.

Virupakshappa warns authorities if rainwater treatment is not corrected
ಮಳೆನೀರು ಹೋಗುವ ಮಾರ್ಗ ಸರಿಪಡಿಸದಿದ್ದರೆ ಕೇಸ್​ ಹಾಕುವೆ: ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ
author img

By

Published : Jan 24, 2020, 7:16 PM IST

ಹಾವೇರಿ/ರಾಣೆಬೆನ್ನೂರು: ತಾಲೂಕಿನ ಎರೆಕುಪ್ಪಿ ಗ್ರಾಮದಲ್ಲಿ ಮಳೆ ನೀರು ಸರಿಯಾಗಿ ಹೋಗದೇ ಸಾರ್ವಜನಿಕರ ಮನೆಯೊಳಗೆ ನುಗ್ಗುತ್ತಿದೆ. ಇದನ್ನು ಸರಿಪಡಿಸದಿದ್ದರೆ ತಹಶೀಲ್ದಾರ್, ಸರ್ವೆ ಮತ್ತು ಆರ್​ಡಿಪಿಆರ್ ಇಲಾಖೆ ಅಧಿಕಾರಿಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದ್ದಾರೆ.

ಮಳೆನೀರು ಹೋಗುವ ಮಾರ್ಗ ಸರಿಪಡಿಸದಿದ್ರೆ ಕೇಸ್​: ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ

ನಗರದ ತಾಲೂಕು ಪಂಚಾಯತ್​ ಸಭಾಭವನದಲ್ಲಿ ರಾಣೆಬೆನ್ನೂರು ಹಾಗೂ ಬ್ಯಾಡಗಿ ತಾಲೂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಯಾರೋ ಹೆದರಿಸುತ್ತಾರೆ ಎಂದು ತಾವುಗಳು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದೀರಿ. ಇದನ್ನು ಸರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ನಿಮ್ಮಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ತಾಲೂಕಿನ ಸರ್ಕಾರಿ ಆಸ್ಪತ್ರೆ ಒಳಗಡೆ ಸ್ವಚ್ಛತೆ ಕಾಪಾಡುತ್ತಿಲ್ಲ. ಶೂಶ್ರೂಕಿಯರು ಕೆಲಸ ಮಾಡದೆ ಆರಾಮವಾಗಿ ಕೂತಿರುವ ಪೋಟೋ ನಮ್ಮ ವ್ಯಾಟ್ಸ್‌ಆ್ಯಪ್‌ಗೆ ಬಂದಿವೆ ಎಂದು ಆರೋಗ್ಯಾಧಿಕಾರಿಗೆ ತಿಳಿಸಿದರು. ಇದರ ಬಗ್ಗೆ ನೀವುಗಳು ನಿಮ್ಮ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದರು.

Intro:Kn_rnr_02_kdp_meeting_Ranebennur_kac10001.

ಮಳೆ ನೀರು ಹೋಗಲು ಸರಿಯಾದ ಮಾರ್ಗ ಮಾಡದಿದ್ದರೆ ಅಧಿಕಾರಿಗಳ ಮೇಲೆ ಕೇಸು ಹಾಕುವೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ.

ರಾಣೆಬೆನ್ನೂರ: ತಾಲೂಕಿನ ಎರೆಕುಪ್ಪಿ ಗ್ರಾಮದಲ್ಲಿ ಮಳೆ ನೀರು ಸರಿಯಾಗಿ ಹೋಗದೆ ಸಾರ್ವಜನಿಕರ ಮನೆಯೊಳಗೆ ನುಗ್ಗುತ್ತಿದೆ. ಇದನ್ನು ಸರಿ ಮಾಡದೆ ಇದ್ದರೆ ತಹಸೀಲ್ದಾರ, ಸರ್ವೆ ಮತ್ತು ಆರ್ಡಿಪಿಆರ್ ಇಲಾಖೆ ಅಧಿಕಾರಿಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಕೆ ನೀಡಿದರು.

Body:ರಾಣೆಬೆನ್ನೂರ ನಗರದ ತಾಲೂಕ ಪಂಚಾಯತ ಸಭಾಭವನದಲ್ಲಿ ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲೂಕಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಮಾಡಿದರು.

ಕಳೆದ ಎರಡು ವರ್ಷದಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಧ್ಯವಾಗುತ್ತಿಲ್ಲ. ಯಾರೋ ಹೆದರಿಸುತ್ತಾರೆ ಎಂದು ತಾವುಗಳು ಕಾಮಗಾರಿ ಮಾಡಲು ಹಿಂದೇಟು ಹಾಕುತ್ತಿದ್ದಿರಿ. ಇದನ್ನು ಸರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ನಿಮ್ಮಗಳ ಮೇಲೆ ಕೇಸ್ ಹಾಕಲಾಗುವುದು ಎಚ್ಚರಿಕೆ ನೀಡುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇನ್ನೂ ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ತಾಲೂಕಿನ ಸರ್ಕಾರಿ ಆಸ್ಪತ್ರೆ ಒಳಗಡೆ ಸ್ವಚ್ಛತೆ ಕಾಪಾಡುತ್ತಿಲ್ಲ. ಶೂಶ್ರೂಕಿಯರು ಕೆಲಸ ಮಾಡದೆ ಆರಾಮವಾಗಿ ಕೂತಿರುವ ಪೋಟೋ ನಮ್ಮ ವ್ಯಾಟ್ಸಪ್ ಬಂದಿವೆ ಎಂದು ಆರೋಗ್ಯಾಧಿಕಾರಿಗೆ ತಿಳಿಸಿದರು. ಇದರ ಬಗ್ಗೆ ನೀವುಗಳು ನಿಮ್ಮ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದರು.

ತಾಲೂಕಿನ ರಸ್ತೆಗಳ ಕಾಮಗಾರಿ ನಡೆದಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ‌ಇದರ ಬಗ್ಗೆ ಗಮನ ಹರಿಸಲು ಅಧಿಕಾರಿಯಾದ ರಾಮಪ್ಪ ಅವರಿಗೆ ಸೂಚನೆ ನೀಡಿದರು.Conclusion: ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಳ್ಳಿ, ಜಿಪಂ ಸದಸ್ಯರಾದ ಏಕನಾಥ ಭಾನುವಳ್ಳಿ, ಮಂಗಳಗೌರಿ ಪೂಜಾರ, ಗದಿಗೆವ್ವ ದೇಸಾಯಿ, ತಹಸೀಲ್ದಾರ ಬಸನಗೌಡ ಕೊಟುರು, ಇಓ ಶ್ಯಾಮಸುಂದರ ಕಾಂಬಳೆ ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.