ಹಾವೇರಿ: ರಂಜಾನ್ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆಗೆ ವಿದೇಶಿ ಹಣ್ಣುಗಳು ಆಗಮಿಸಿದ್ದು, ಮುಸ್ಲಿಂ ಬಾಂಧವರು ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ರಂಜಾನ್ ಹಬ್ಬದ ವಿಶೇಷವಾಗಿ ನಗರದ ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣುಗಳು ಕಾಲಿಟ್ಟಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಜೋರಾಗಿ ನಡೆದಿದೆ. ಗೋಡಂಬಿ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ, ಕೇರಬೀಜ, ಮಗಜ ಮತ್ತು ಅಕ್ರೋಟ್ ಹಣ್ಣುಗಳು ಪ್ರಮುಖವಾಗಿವೆ. ಹಬ್ಬದ ನಿಮಿತ್ತ ಉಪವಾಸ ಕೈಗೊಳ್ಳುವುದರಿಂದ ರೋಜಾ ಕೊನೆಯ ದಿನ ಸಮೀಪಿಸುತ್ತಿದ್ದು, ಮಾರಾಟ ಜೋರಾಗಿ ನಡೆದಿದೆ. ಮಾವಿನ ಹಣ್ಣಿನ ಮಾರಾಟದ ಭರಾಟೆ ಸಹ ಜೋರಾಗಿದೆ.