ETV Bharat / state

ವಾಜಪೇಯಿ ಜನ್ಮದಿನದಂದು ಸಸಿ ನೆಟ್ಟು ದಾಂಪತ್ಯ ಆರಂಭಿಸಿದ ನವಜೋಡಿ - Vajpayee Birthday Background

ರಾಣೆಬೆನ್ನೂರು ನಗರದಲ್ಲಿ ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಅಭಿಮಾನಿಗಳ ಬಳಗದ ವತಿಯಿಂದ ಇಂದು ವಾಜಪೇಯಿ ಜನ್ಮದಿನದ ಹಿನ್ನೆಲೆ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ನವಜೋಡಿಯೊಂದು ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು

author img

By

Published : Dec 25, 2020, 12:26 PM IST

ರಾಣೆಬೆನ್ನೂರು (ಹಾವೇರಿ): ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಹಿನ್ನೆಲೆ ನವಜೋಡಿಯೊಂದು ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು

ಕುಂಬಾರ ಓಣಿಯ ಷಣ್ಮುಖ ಸಾಲಿಮನಿ ಹಾಗೂ ಕಾವ್ಯ ಎಂಬ ನವಜೋಡಿ ಮದುವೆ ‌ಮಂಟಪದಿಂದ ನೇರವಾಗಿ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಸಿ ನೆಡುವ ಮೂಲಕ ವಾಜಪೇಯಿ ‌ಜನ್ಮ ದಿನಾಚರಣೆ ಮಾಡಿ ದಾಂಪತ್ಯ ಶುರು ಮಾಡಿದರು.

ಓದಿ: ಹಾವೇರಿ ಜಿಲ್ಲೆಯಾದ್ಯಂತ ಇಂದು ಕ್ರಿಸ್ಮಸ್ ಆಚರಣೆ

ನಂತರ ಮಾತನಾಡಿದ ಷಣ್ಮುಖ ಸಾಲಿಮನಿ, ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಮಾನಿ. ಅವರ ವೈಚಾರಿಕತೆ, ವ್ಯಕ್ತಿತ್ವ, ಆದರ್ಶಗಳನ್ನು ‌ಮೈಗೂಡಿಸಿಕೊಂಡಿದ್ದೇನೆ. ಆದ್ದರಿಂದ ಅವರ ಹುಟ್ಟುಹಬ್ಬದಂದು ನಾವು ಸಸಿ ನೆಡುವ ಮೂಲಕ ಅವರ ಹುಟ್ಟಿದ ದಿನವನ್ನು ಆಚರಿಸಿದ್ದೇವೆ ಎಂದು ಖುಷಿಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.