ETV Bharat / state

ಉತ್ತರದ ಗಂಗಾರತಿಯಂತೆ ರಾಜ್ಯದಲ್ಲಿ ಪ್ರಥಮ ತುಂಗಾರತಿಗೆ ಪುಣ್ಯಕೋಟಿ ಮಠ ಸಜ್ಜು - ತುಂಗಾರತಿ ಕಾರ್ಯಕ್ರಮ

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕುಮಾರಪಟ್ಟಣ (ಕೋಡಿಯಾಲ) ಗ್ರಾಮದ ಪುಣ್ಯಕೋಟಿ ಮಠದ ಬಾಲಯೋಗಿ ಸ್ವಾಮೀಜಿ ನೇತೃತ್ವದಲ್ಲಿ ತುಂಗಾರತಿ ಕಾರ್ಯಕ್ರಮ ನಡೆಯಲಿದೆ.

Tungarathi program at Haveri
ಪ್ರಥಮ ತುಂಗಾರತಿಗೆ ಪುಣ್ಯಕೋಟಿ ಮಠ ಸಜ್ಜು
author img

By

Published : Feb 23, 2020, 6:33 PM IST

ಹಾವೇರಿ: ಕರ್ನಾಟಕ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿತೀರದಲ್ಲಿ ತುಂಗಾರತಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಚೊಚ್ಚಲ ತುಂಗಾರತಿ ಇದಾಗಿದ್ದು ಮಾ.04 ರಂದು ಅದ್ಧೂರಿಯಾಗಿ ನಡೆಯಲಿದೆ.

ಉತ್ತರ ಭಾರತದ ಕಾಶಿ, ಹರಿದ್ವಾರ ಹಾಗೂ ಋಷಿಕೇಶದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿಯೇ ತುಂಗಭದ್ರಾ ನದಿಗೆ ತುಂಗಾರತಿ ನಡೆಯಲಿದೆ. ಈ ಅಪರೂಪದ ಸಂದರ್ಭಕ್ಕೆ ನಾಡಿನ ವಿವಿಧ ಮಠಾಧೀಶರುಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಲಿದ್ದಾರೆ.

ಪ್ರಥಮ ತುಂಗಾರತಿಗೆ ಪುಣ್ಯಕೋಟಿ ಮಠ ಸಜ್ಜು

ಉದ್ದೇಶವೇನು? ಸಿದ್ಧತೆಗಳ ವಿವರ:

ತುಂಗಾರತಿಯ ಉದ್ದೇಶ ನಾ ಮಳೆ, ಬೆಳೆ ಸಮೃದ್ಧಿಯಾಗಿ ಅನ್ನದಾತನ ಬದುಕು ಉಜ್ವಲಗೊಳ್ಳಲಿ ಎಂಬುದಾಗಿದೆ. ಕಾಲಬೈರವೇಶ್ವರ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗಂಗಾಪೂಜೆ, ರುದ್ರಹೋಮ, ಘನಹೋಮ, ನವದುರ್ಗ ಪೂಜಾ ಕಾರ್ಯಕ್ರಮಗಳೂ ಈ ವೇಳೆ ಜರುಗಲಿವೆ. ರಾಣೆಬೆನ್ನೂರಿನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಈ ಪೂಜಾ ಕೈಂಕರ್ಯ ನೆರವೇರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.