ETV Bharat / state

ಹಾವೇರಿಯಲ್ಲಿ ನಾಳೆಯಿಂದ ಮಂಗಳವಾರದವರೆಗೆ ಕಠಿಣ ಲಾಕ್​ಡೌನ್​ - corona

ಹಾವೇರಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ನಾಳೆಯಿಂದ ಮಂಗಳವಾರದವರೆಗೆ ಕಠಿಣ ಲಾಕ್​ಡೌನ್​ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿಯಮ ಮೀರಿದರೆ ಕಠಿಣ ಕ್ರಮ ಖಂಡಿತ ಎಂದು ಎಸ್​ಪಿ ಕೆ.ಜಿ. ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

Haveri S P KG Devaraj
ಹಾವೇರಿ ಎಸ್​ಪಿ ಕೆ.ಜಿ.ದೇವರಾಜ್
author img

By

Published : May 20, 2021, 8:39 PM IST

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರದಿಂದ ಮಂಗಳವಾರದವರೆಗೆ ಕಠಿಣ ಲಾಕ್​ಡೌನ್ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿಯಮ ಮೀರಿ ಹೊರಗೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ಕೆ.ಜಿ. ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ಎಸ್​ಪಿ ಕೆ.ಜಿ. ದೇವರಾಜ್

ಜಿಲ್ಲೆಯಲ್ಲಿ ಔಷಧಿ, ಹಾಲು ಆಸ್ಪತ್ರೆ ಹೊರತುಪಡಿಸಿ ಯಾವುದೇ ಅಂಗಡಿಗಳು ತೆರೆಯುವದಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಲಾಕ್​ಡೌನ್ ಮಧ್ಯೆ​ ಸಹ ಕೆಲವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ಅನಗತ್ಯ ಓಡಾಡುವವರಿಗೆ ದಂಡ ಹಾಕಿದರೂ ಕೇರ್​ ಮಾಡುತ್ತಿಲ್ಲ.

ಜನತೆ ಸಂಪೂರ್ಣ ಸಹಕಾರ ನೀಡಿ ಕೊರೊನಾ ಸೋಂಕಿನ ಚೈನ್ ಕತ್ತರಿಸಲು ಸಹಕರಿಸಬೇಕಿದೆ. ಕೊರೊನಾ ಕಡಿಮೆಯಾದರೆ ಸಾರ್ವಜನಿಕರು ಮೊದಲಿನಂತೆ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಎಸ್​ಪಿ ದೇವರಾಜ್ ಹೇಳಿದ್ದಾರೆ.

ಓದಿ:ತಪ್ಪು ಮಾಡಿದೆ,ಅಪ್ಪಾ ನನ್ನನ್ನು ಕ್ಷಮಿಸಿ; ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.