ರಾಣೆಬೆನ್ನೂರು: ಸಂಭ್ರಮದಿಂದ ಕುಟುಂಬಸ್ಥರ ಮದುವೆ ಮುಗಿಸಿ ಸ್ವಂತ ಗ್ರಾಮಕ್ಕೆ ಮರಳುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೌದು, ರಾಣೆಬೆನ್ನೂರು ಹೊರವಲಯದ ಆರಾಧ್ಯ ಡಾಬಾ ಬಳಿ ಭೀಕರ ಅಪಘಾತವೊಂದಕ್ಕೆ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಹರಿಹರ ತಾಲೂಕಿನ ಕೊಟ್ಯಾಧೀಶರಾದ ಕೆ.ಎನ್.ಹನುಮಂತಪ್ಪ ನಿಂಗಪ್ಪ (60) ಮೊಮ್ಮಗಳು ಶಿವಾನಿ(12) ಹಾಗೂ ಸೋದರಿ ಸಂಬಂಧಿ ಗೀತಮ್ಮ(50) ಮೃತಪಟ್ಟ ದುರ್ದೈವಿಗಳೆಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಸ್ ಕೆಳಗೆ ಅಪ್ಪಚ್ಚಿಯಾದ ಬೈಕ್: ಓರ್ವ ಸಾವು,ಇಬ್ಬರು ಗಂಭೀರ
ಕೆ.ಹನುಮಂತಪ್ಪನವರು ಹುಬ್ಬಳ್ಳಿಯಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ತಮ್ಮ ಸ್ವಂತ ವ್ಯಾಗನರ್ ಕಾರಿನೊಂದಿಗೆ ಕುಂಬಳೂರ ಗ್ರಾಮಕ್ಕೆ ವಾಪಸ್ ಹೋಗುತ್ತಿದ್ದರು. ರಾಣೆಬೆನ್ನೂರು ಬಳಿ ಬರುತ್ತಿದ್ದಂತೆ ನಿದ್ದೆಯ ಮಂಪರಿನಿಂದ ಮುಂದೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಮಗಳು ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು ಸದ್ಯ ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.