ಹಾವೇರಿ: ರಾಣೆಬೆನ್ನೂರಿನ ಹುಲಿ ಎಂದೇ ಪ್ರಸಿದ್ಧಿ ಪಡೆದಿದ್ದ ಹೋರಿಯೊಂದು ಸೋಮವಾರ ಇಹಲೋಕ ತ್ಯಜಿಸಿದ್ದು, ಇಂದು ಕುಟುಂಬಸ್ಥರು ಹೋರಿ ಅಂತ್ಯಕ್ರಿಯೆ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಳೆದ 10 ವರ್ಷಗಳ ಕಾಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಖ್ಯಾತಿ ಗಳಿಸಿದ್ದ ರಾಣೆಬೆನ್ನೂರು ಹುಲಿಗೆ ಸಾವಿರಾರು ಅಭಿಮಾನಿಗಳಿದ್ದರು. ಗುಡ್ಡದ ಅನ್ವೇರಿ ಗ್ರಾಮದಲ್ಲಿ ಹೋರಿ ಅಂತ್ಯಕ್ರಿಯೆ ಮಾಡಲಾಗಿದ್ದು, ಇಂದು ಸ್ಥಳಕ್ಕೆ ಮಾಲೀಕ ದೆವ್ವ ಮರಿಯಪ್ಪ ಮತ್ತು ಆತನ ಪುತ್ರ ತೆರಳಿ ಹೋರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಮಾಧಿ ಮೇಲೆ ಹೋರಿಯ ಚಿಕ್ಕ ಕಟೌಟ್ ನಿಲ್ಲಿಸಿ, ಹೂಮಾಲೆ ಹಾಕಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಹೋರಿಯ ಮಾಲೀಕ ದೆವ್ವ ಮರಿಯಪ್ಪನವರು ಅಗಲಿದ ಹೋರಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಈ ರೀತಿಯ ಹೋರಿ ನನಗೆ ಮತ್ತೆ ಸಿಗುವುದಿಲ್ಲ ಎಂದು ಭಾವುಕರಾದರು.
ಇದನ್ನೂ ಓದಿ: 'ರಾಣೆಬೆನ್ನೂರು ಹುಲಿ' ನಿಧನ: ನೆಚ್ಚಿನ ಹೋರಿಯ ಅಗಲಿಕೆಗೆ ಸಾವಿರಾರು ಜನರ ಕಣ್ಣೀರ ವಿದಾಯ!