ETV Bharat / state

'ಇಲ್ಲೇ ಇದ್ರೆ ನಮ್ಮ ಪ್ರಾಣ ಹೋಗುತ್ತೆ ಸರ್':ಮೃತ ನವೀನ್ ಸ್ನೇಹಿತೆ ಪ್ರತಿಭಾ ಅಳಲು! - haveri students in Ukraine

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕೃಷ್ಣಾ ಎಂಬುವವರಿಗೆ ಕರೆ ಮಾಡಿದ ಮೃತ ನವೀನ್ ಸ್ನೇಹಿತೆ ಪ್ರತಿಭಾ ಉಕ್ರೇನ್​ನಲ್ಲಿ ಬಿಗಡಾಯಿಸಿರುವ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ..

students in critical situation at Ukraine
ಮೃತ ನವೀನ್ ಸ್ನೇಹಿತೆ ಪ್ರತಿಭಾ ಅಳಲು
author img

By

Published : Mar 2, 2022, 11:41 AM IST

ಹಾವೇರಿ: ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತ ನವೀನ್ ಸ್ನೇಹಿತೆ ಪ್ರತಿಭಾ ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಾಟ್ಸ್​ಆ್ಯಪ್​ ಕರೆ ಮಾಡಿದ ಪ್ರತಿಭಾ ಅಲ್ಲಿನ ಭಯಾನಕ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೃಷ್ಣಾ ಎಂಬುವವರಿಗೆ ಕರೆ ಮಾಡಿದ ಮೃತ ನವೀನ್ ಸ್ನೇಹಿತೆ ಪ್ರತಿಭಾ....

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕೃಷ್ಣಾ ಎಂಬುವವರಿಗೆ ಕರೆ ಮಾಡಿದ ಮೃತ ನವೀನ್ ಸ್ನೇಹಿತೆ ಪ್ರತಿಭಾ, ಖಾರ್ಕೀವ್​ನಲ್ಲಿ ಇರುವವರೆಲ್ಲ ಕರ್ನಾಟಕ ಮೂಲದ ವಿದ್ಯಾರ್ಥಿಗಳು. ಹತ್ತು ಗಂಟೆಗೆ ಕರ್ಫ್ಯೂ ತೆರವಾಗುವ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ಹೊರಗೆ ಬಂದು ಪೋಲೆಂಡ್ ಗಡಿಭಾಗಕ್ಕೆ ಬರಲು ನಿರ್ಧಾರ ಮಾಡಿದ್ದೇವೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

ಇಲ್ಲಿನ ಪರಿಸ್ಥಿತಿ ಬಹಳ ಹದಗೆಟ್ಟಿದೆ. ನಮಗೆ ಕಷ್ಟ ಆಗುತ್ತಿದೆ. ಇಲ್ಲೇ ಪಕ್ಕದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ನಾವು ಇಲ್ಲಿಂದ ಹೋಗಬೇಕು ಸರ್. ಇಲ್ಲೇ ಇದ್ರೆ ನಮ್ಮ ಪ್ರಾಣ ಹೋಗುತ್ತೆ ಸರ್. ನವೀನ್​ನನ್ನು ಹೇಗೆ ಕಳೆದುಕೊಂಡೆವೋ ಅದೇ ಗತಿ ನಮಗೂ ಬರಲಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.