ಹಾವೇರಿ: ಕೊರೊನಾದಿಂದ ಸಾವನ್ನಪ್ಪಿದ ಹಲವರಿಗೆ ಗೌರವಯುತವಾದ ಅಂತ್ಯಸಂಸ್ಕಾರ ಸಿಗುತ್ತಿಲ್ಲ. ರಕ್ತಸಂಬಂಧಿಕರು ಕೊರೊನಾ ಬಂದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹಿಂದೇಟು ಹಾಕಿದ ಪ್ರಕರಣಗಳು ನಡೆದಿವೆ. ಇಂತಹ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡಲು ರಾಜ್ಯ ಬಿಜೆಪಿ ತಂಡ ರಚಿಸಿದೆ.
ಜಿಲ್ಲಾಮಟ್ಟದ ತಾಲೂಕುಮಟ್ಟದ ತಂಡಗಳು ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಸಂಸ್ಕಾರವನ್ನ ಗೌರವಯುತವಾಗಿ ನಡೆಸುತ್ತವೆ. ಇಲ್ಲಿಯ ಬಿಜೆಪಿ ಕಾರ್ಯಕರ್ತರು ಮೊದಲು ಸಂಬಂಧಿಕರ ಮನವೊಲೈಸುವ ಕಾರ್ಯ ಮಾಡುತ್ತಾರೆ. ಅವರ ಒಪ್ಪದಿದ್ದರೇ ತಾವೇ ಎಲ್ಲ ಮುಂಜಾಗೃತಾ ಕ್ರಮಗಳನ್ನ ತಗೆದುಕೊಂಡು ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುತ್ತಾರೆ. ಹಾವೇರಿಯಲ್ಲಿ 20 ಸದಸ್ಯರ ತಂಡ ಇದೀಗ ಗೌರವಯುತ ಅಂತ್ಯಸಂಸ್ಕಾರಕ್ಕೆ ಮುಂದಾಗಿದೆ.
ಪ್ರತಿಜಿಲ್ಲಾಮಟ್ಟದಲ್ಲಿ, ತಾಲೂಕುಮಟ್ಟದಲ್ಲಿ ಗೌರವಯುತ ಅಂತ್ಯಸಂಸ್ಕಾರ ತಂಡ ರಚಿಸಿದೆ. ಈ ತಂಡಗಳು ಜಿಲ್ಲಾಮಟ್ಟ ಮತ್ತು ತಾಲೂಕುಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶವಸಂಸ್ಕಾರಕ್ಕೆ ಸಂಬಂಧಿಕರು ಹಿಂದೇಟು ಹಾಕಿದರೇ ಈ ತಂಡದ ಸದಸ್ಯರು ಮುಂದೆ ನಿಂತು ಶವಸಂಸ್ಕಾರ ನಡೆಸುತ್ತಾರೆ.
ಜಿಲ್ಲೆಯಲ್ಲಿ ಈಗಾಗಲೇ ಹಲವು ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ರೀತಿ ಸಾವನ್ನಪ್ಪಿದಾಗ ಸಂಬಂಧಿಕರು ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ, ಸಂಬಂಧಿಕರು ಮುಂದೆ ಬರದಿದ್ದಾಗ ಈ ಬಿಜೆಪಿ ತಂಡ ಅಂತ್ಯಕ್ರಿಯೆಗೆ ಮುಂದಾಗುತ್ತೆ. ಅಂತ್ಯಕ್ರಿಯೆಗೊ ಮೊದಲು ಸಂಬಂಧಿಕರ ಮನವೊಲೈಸುವ ಪ್ರಯತ್ನ ಮಾಡುತ್ತೆ. ಆದರೂ ಸಹ ಸಂಬಂಧಿಕರು ಅಂತ್ಯಕ್ರಿಯೆಗೆ ಬರದಿದ್ದರೆ ತಂಡದ ಸದಸ್ಯರು ಸೇರಿಕೊಂಡು ಅಂತ್ಯಕ್ರಿಯೆಯಲ್ಲಿ ಮಾಡುತ್ತಾರೆ.
ಹಾವೇರಿ ಜಿಲ್ಲೆಯ ಮಟ್ಟದಲ್ಲಿ ಮತ್ತು ತಾಲೂಕುಮಟ್ಟದಲ್ಲಿ 20 ಸದಸ್ಯರು ಈ ಕಾರ್ಯ ಮಾಡುತ್ತಿದ್ದಾರೆ. ಈ ತಂಡ ಈಗಾಗಲೇ ನಾಲ್ಕು ಜನರ ಅಂತ್ಯಕ್ರಿಯೆಯನ್ನ ಗೌರವಯುತವಾಗಿ ನಡೆಸಿದೆ. ಅಲ್ಲದೆ ರಕ್ತಸಂಬಂಧಿಕರ ಮನವೊಲೈಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಸರ್ಕಾರ ನಿಗದಿ ಮಾಡಿದ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ತಂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಬಿಜೆಪಿ ಗೌರವಯುತ ಅಂತ್ಯಕ್ರಿಯೆ ಕಾರ್ಯಕ್ರಮ ಗಮನ ಸೆಳೆಯುತ್ತಿದೆ.
ಓದಿ: ಉಡುಪಿಯಲ್ಲಿ ನಿರಾಶ್ರಿತರ ಅನಗತ್ಯ ಅಲೆದಾಟ: ತಾತ್ಕಾಲಿಕ ಪುನರ್ವಸತಿ ಕೆಂದ್ರ ಸ್ಥಾಪನೆಗೆ ಒತ್ತಾಯ