ETV Bharat / state

ಫೇಸ್​​ಬುಕ್​​ನಲ್ಲಿ ಪ್ರೇಮ್​ ಕಹಾನಿ, ಕೈ ಕೊಟ್ಟ ಆಸಾಮಿ.. ಹುಡುಗನ ಮನೆ ಮುಂದೆ ಹುಡುಗಿ ಠಿಕಾಣಿ, ಮುಂದೆ? - Haveri Simple Marriage News

ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಇತ್ತೀಚೆಗೆ ದೂರ ಮಾಡಿದ್ದ. ಕಳೆದ ಐದಾರು ತಿಂಗಳಿನಿಂದ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಆಕೆಯ ಕೈಗೆ ಸಿಗಲಿಲ್ಲ. ಇದರಿಂದ ಬೇಸತ್ತ ಹುಡುಕಿ ಪ್ರಿಯಕರನ ಮನೆ ಹುಡುಕಿಕೊಂಡು ಬಂದು ಆತನ ಪೋಷಕರೊಂದಿಗೆ ಮಾತನಾಡಿ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾಳೆ.

Simple Marriage in Haveri
ಫೇಸ್​​ಬುಕ್​​ನಲ್ಲಿ ಲವ್ ಕಹಾನಿ
author img

By

Published : May 31, 2020, 8:49 AM IST

Updated : May 31, 2020, 11:18 AM IST

ಹಾವೇರಿ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಪ್ರೀತಿ ಪ್ರೇಮ ಪ್ರಣಯ ಎಂದು ಸುತ್ತಾಡಿದ್ದ ಜೋಡಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಲಾಕ್ ಡೌನ್ ಸಮಯದಲ್ಲಿ ಸರಳವಾಗಿ ಮದುವೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಯುವಕ ಹಾಗೂ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಯುವತಿ ಫೇಸ್ ಬುಕ್, ವಾಟ್ಸ್ ಆ್ಯಪ್​ ಮೂಲಕ ಪರಸ್ಪರ ಪರಿಚಯವಾಗಿದ್ದರು. ಈ ಪರಿಚಯ ಸ್ನೇಹದ ಬಳಿಕ ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವೆ ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ನಡೆದು ಇಬ್ಬರೂ ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಅದ್ಯಾಕೋ ಏನೋ ಇತ್ತೀಚೆಗೆ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ದೂರ ಮಾಡಿದ್ದ. ಕಳೆದ ಐದಾರು ತಿಂಗಳಿನಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಕೆಯ ಕೈಗೆ ಸಿಗಲಿಲ್ಲ. ಇದರಿಂದ ಬೇಸತ್ತ ಹುಡುಕಿ ಪ್ರಿಯಕರನ ಮನೆ ಹುಡುಕಿಕೊಂಡು ಬಂದು ಆತನ ಪೋಷಕರೊಂದಿಗೆ ಮಾತನಾಡಿ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾಳೆ.

ಆಗ ಯುವಕನ ಮನೆಯವರು ಯುವತಿ ಮನೆಯವರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಯುವತಿ ತನ್ನ ಮನೆಯವರನ್ನು ಕರೆದುಕೊಂಡು ಬಂದಾಗ. ಯುವಕನ ಮನೆಯವರು ಮದುವೆಗೆ ಒಪ್ಪಲಿಲ್ಲ. ಈ ಕಾರಣ ಪ್ರಕರಣ ಬಂಕಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಮದುವೆಗೆ ಒಪ್ಪದಿದ್ದರೆ ಪ್ರಕರಣ ದಾಖಲಿಸುವುದಾಗಿ ಯುವತಿ ಪಟ್ಟು ಹಿಡಿದಿದ್ದಳು. ಇದರಿಂದ ಹೆದರಿದ ಯುವಕ ಎರಡೂ ಕುಟುಂಬದವರ ಸಮ್ಮುಖದಲ್ಲಿ ಪೊಲೀಸ್ ಠಾಣೆ ಬಳಿ ಯುವತಿಯನ್ನು ಮದುವೆಯಾಗಿದ್ದಾನೆ.

ಲಾಕ್ ಡೌನ್ ಇರುವುದರಿಂದ ಯುವಕ ಮತ್ತು ಯುವತಿ ಮನೆಯವರು ಪೊಲೀಸ್ ಠಾಣೆ ಬಳಿಯೇ ಸರಳವಾಗಿ ಇಬ್ಬರಿಗೂ ಪರಸ್ಪರ ಹಾರ ಬದಲಾಯಿಸಿ, ಮದುವೆ ಮಾಡಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಆರಂಭವಾದ ಪ್ರೇಮ ಪ್ರಕರಣ ಸುಖಾಂತ್ಯ ಕಂಡಿದೆ.

Last Updated : May 31, 2020, 11:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.