ETV Bharat / state

ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ - ಈಟಿವಿ ಭಾರತ ಕನ್ನಡ

ಅಕ್ಷರ ಜಾತ್ರೆಗೆ ಭರದ ಸಿದ್ಧತೆ- ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಮಹಿಳೆಯರ ಸೇವೆಗೆ 500ಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಮಿತಿ ಸದಸ್ಯೆಯರು ಸಜ್ಜು

shthri-shakthi-volunteers-for-kannada-sahithya-sammelana-at-haveri
ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ
author img

By

Published : Dec 31, 2022, 9:14 PM IST

Updated : Dec 31, 2022, 9:39 PM IST

ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ

ಹಾವೇರಿ : ಜಿಲ್ಲೆಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಏಲಕ್ಕಿ ನಗರಿಯಲ್ಲಿ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇನ್ನು ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ತ್ರೀಶಕ್ತಿ ಸಮಿತಿ ಸಿದ್ಧವಾಗಿದೆ.

ಮಹಿಳೆಯರಿಗೆ ಸೇವೆ ಸಲ್ಲಿಸಲು ಸ್ತ್ರೀ ಶಕ್ತಿ ಸಮಿತಿ : ಈ ಸ್ತ್ರೀ ಶಕ್ತಿ ಸಮಿತಿಯಲ್ಲಿ ಸುಮಾರು 500ಕ್ಕೂ ಅಧಿಕ ಸ್ವಯಂ ಸೇವಕಿಯರಿದ್ದಾರೆ. ಇವರು ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಸೇವೆ ನೀಡಲಿದ್ದಾರೆ. ಇನ್ನು ಸಮಿತಿಯ 500 ಜನ ಸ್ವಯಂ ಸೇವಕಿಯರು ಒಂದೇ ಬಣ್ಣದ ಸೀರೆಯುಟ್ಟು ಸಮ್ಮೇಳನಕ್ಕೆ ಬರುವ ಮಹಿಳೆಯರನ್ನು ಸ್ವಾಗತಿಸಲಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳೆಯರ ಆರೋಗ್ಯ, ವಸತಿ, ಆಹಾರ ಮತ್ತು ನೀರು ಸೇರಿದಂತೆ ಯಾವುದೇ ಸೇವೆಗಳಿಗೆ ಕೊರತೆಯಾಗದಂತೆ ಮಹಿಳೆಯರ ಸಂಘ ನೋಡಿಕೊಳ್ಳಲಿದೆ.

ಮಹಿಳಾ ಸ್ವಯಂ ಸೇವಕರಿಂದ ವಿಶೇಷ ಕಾಳಜಿ : ಇನ್ನು, ಸಮಿತಿಯು ಮಹಿಳೆಯರ ಅನುಕೂಲಕ್ಕಾಗಿ ವಾಹನಗಳ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವ ಮಹಿಳಾ ಸಾಹಿತಿಗಳಿಗೆ ಮಹಿಳಾ ಲೇಖಕಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿರುವುದಾಗಿ ಸಮಿತಿಯ ಸದಸ್ಯೆಯರು ತಿಳಿಸಿದ್ದಾರೆ. ಮಹಿಳೆಯರ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಸ್ವಯಂ ಸೇವಕಿಯರು ವಿಶೇಷ ಕಾಳಜಿ ವಹಿಸಲಿದ್ದಾರೆ.

ಸಮ್ಮೇಳನದಲ್ಲಿ 8 ಜಿಲ್ಲೆಗಳ ಸ್ತ್ರಿಶಕ್ತಿಸಮಿತಿಯ ಸದಸ್ಯೆಯರು ಮಹಿಳೆಯರಿಗೆ ಸೇವೆ ಒದಗಿಸಲಿದ್ದಾರೆ. ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ವಸತಿ ಸಾಲದಿದ್ದರೇ ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಿದ್ದಾರೆ. ರಾಜ್ಯದಲ್ಲಿರುವ ಸಾಹಿತ್ಯಾಭಿಮಾನಿಗಳು ಸಮ್ಮೇಳನಕ್ಕೆ ಬಂದು ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯೆಯರು ಮನವಿ ಮಾಡಿದ್ದಾರೆ.

ಸಾಹಿತ್ಯ ಸಮ್ಮೇಳನ : ಜನವರಿ 6, 7 ಮತ್ತು 8 ರಂದು ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಕಾರ್ಯಗಳು ಭರದಿಂದ ಸಾಗುತ್ತಿವೆ. ಹಾವೇರಿ ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ದೇವಸ್ಥಾನದ ಮುಂದೆ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ಇದನ್ನೂ ಓದಿ : ಕನ್ನಡ ಸಾಹಿತ್ಯ ಸಮ್ಮೇಳನ ಯಾವುದೇ ಜಾತಿ, ಧರ್ಮದ ಸಮ್ಮೇಳನವಲ್ಲ: ಮಹೇಶ್ ಜೋಷಿ

Last Updated : Dec 31, 2022, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.