ಹಾವೇರಿ: ಶ್ರಾವಣ ಮಾಸ ಬಂದರೆ ಸಾಕು ಮಠ ದೇವಸ್ಥಾನಗಳಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಅಂಗವಾಗಿ ಜಿಲ್ಲೆಯ ವಿಠ್ಹಲ್ ಮಂದಿರದಲ್ಲಿ ಜ್ಞಾನೇಶ್ವರ ಮಹಾರಾಜರ ಪಾರಾಯಣ ನಡೆಸಲಾಯಿತು.
ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನಲ್ಲಿನ ಪಾಂಡುರಂಗ -ರುಕ್ಷ್ಮಿಣಿ ಮೂರ್ತಿಗಳನ್ನು ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಈ ಸಂಬಂಧ ಮುಂಜಾನೆ, ಮಧ್ಯಾಹ್ನ ಮತ್ತು ಸಂಜೆ ಭಜನೆಯನ್ನ ಆಯೋಜಿಸಲಾಗಿರುತ್ತದೆ. ಶ್ರಾವಣ ಮಾಸದ ಪ್ರತಿದಿನ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದೇ ಆ.30 ರಂದು ನಗರದಲ್ಲಿ ಪಲ್ಲಕ್ಕಿ ಸೇವೆಯನ್ನ ನಡೆಸಲಾಗುತ್ತದೆ. ಪಲ್ಲಕ್ಕಿ ಸೇವೆಯೊಂದಿಗೆ ಪ್ರಸ್ತುತ ವರ್ಷದ ಶ್ರಾವಣಮಾಸದ ಕಾರ್ಯಕ್ರಮಗಳು ಮುಕ್ತಾಯವಾಗುತ್ತದೆ.