ಹಾವೇರಿ: ಮಹಾಶಿವರಾತ್ರಿ ಪ್ರಯುಕ್ತ ನಗರದ ಪ್ರಮುಖ ಈಶ್ವರ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಗಳಿಗೆ ಭರದಿಂದ ಸಿದ್ದತೆ ನಡೆಸಲಾಗಿದೆ.
ಜಯದೇವ ನಗರದಲ್ಲಿರುವ ಪ್ರಜಾಪೀತಿ ಬ್ರಹ್ಮಕುಮಾರ್ ಈಶ್ವರಿ ವಿದ್ಯಾಲಯದಲ್ಲಿ 60 ಅಡಿ ಎತ್ತರದ ಈಶ್ವರನಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಸುಮಾರು ಅರವತ್ತು ಅಡಿ ಎತ್ತರ, ನಲವತ್ತು ಅಡಿ ಅಗಲದಲ್ಲಿ ಈಶ್ವರ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಶಿವರಾತ್ರಿಯಂದು ಇದನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.
ಓದಿ: ಮೀಸಲಾತಿ ಬೇಡಿಕೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಟ್ವೀಟ್
ಬಸವೇಶ್ವರನಗರದ ದ್ವಾದಶಜ್ಯೋತಿರ್ಲಿಂಗಗಳ ದೇವಸ್ಥಾನದಲ್ಲಿ ಶಿವರಾತ್ರಿ ಸಿದ್ದತೆ ಭರದಿಂದ ಆರಂಭಗೊಂಡಿದ್ದು, ಭಕ್ತರ ದಂಡು ಹರಿದುಬರಲಿದೆ ಎಂಬ ನಿರೀಕ್ಷೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿದೆ.