ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಮ್ಮ ಕುಟುಂಬಕ್ಕೆ ಟಿಕೆಟ್ ತಪ್ಪಿದ್ದಕ್ಕೆ ಪರೋಕ್ಷವಾಗಿ ಸಂಸದ ಶಿವಕುಮಾರ್ ಉದಾಸಿ ನೋವು ಹೊರಹಾಕಿದರು.
ಹಾನಗಲ್ನಲ್ಲಿ ಮಾತನಾಡಿದ ಸಂಸದರು, ನಮ್ಮ ಕುಟುಂಬಕ್ಕೆ ಟಿಕೆಟ್ ನೀಡದಿರುವುದಕ್ಕೆ ಕಾರ್ಯಕರ್ತರಿಗೆ ಅಸಮಾಧಾನ ಉಂಟಾಗಿರುವುದು ನಿಜ. ಸ್ವಾಭಾವಿಕವಾಗಿ ಎಲ್ಲರಿಗೂ ನೋವಾಗಿರುತ್ತದೆ. ಹಾಗಾಗಿ ಕೆಲ ಕಾರ್ಯಕರ್ತರು ಹಾನಗಲ್ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ಎಲ್ಲರ ಹತ್ತಿರ ನಾನು ಮಾತನಾಡಿದ್ದೇನೆ ಎಂದರು.
ಈಗಾಗಲೇ ಹೈಕಮಾಂಡ್ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿರುವುದರಿಂದ ನೋವಿದ್ದರೂ ಸಹಿತ ಅದನ್ನು ನುಂಗಿಕೊಂಡು ಪಕ್ಷದ ಸಂಘಟನೆಗಾಗಿ ಒಟ್ಟಾಗಿ ಕೆಲಸ ಮಾಡಿ, ಶಿವರಾಜ್ ಸಜ್ಜನ್ ಅವರನ್ನ ಗೆಲ್ಲಿಸುತ್ತೇವೆ ಎಂದರು.