ETV Bharat / state

ಉಕ್ರೇನ್​​ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು.. ಮನೆಯಲ್ಲಿ ಮಡುಗಟ್ಟಿದ ಶೋಕ - ಉಕ್ರೇನ್​ ರಷ್ಯಾ ಸಂಘರ್ಷ

Russia Ukraine war.. ಉಕ್ರೇನ್​ನ ಖಾರ್ಕಿವ್​​ನಲ್ಲಿ ನಡೆದ ರಷ್ಯಾ ಪಡೆಗಳ ಶೆಲ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಬಲಿಯಾಗಿದ್ದಾನೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಮೃತ ವಿದ್ಯಾರ್ಥಿಯ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

Russia ukraine war india student lost his life

author img

By

Published : Mar 1, 2022, 4:03 PM IST

Updated : Mar 1, 2022, 5:46 PM IST

ಹಾವೇರಿ: ಉಕ್ರೇನ್​ನ ಖಾರ್ಕಿವ್​​ ನಗರದ ಮೇಲೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಹಾವೇರಿಯ ಜಿಲ್ಲೆಯ 21 ವರ್ಷದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್​​ ಸಾವಿಗೀಡಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಮೃತ ವಿದ್ಯಾರ್ಥಿ ನವೀನ್ ಮನೆಯಲ್ಲಿ ಮಡುಗಟ್ಟಿದ ಶೋಕ

ಖಾರ್ಕಿವ್​​ನಲ್ಲಿ 4ನೇ ವರ್ಷದ ಎಂಬಿಬಿಎಸ್​​ ವ್ಯಾಸಂಗ ಮಾಡ್ತಿದ್ದ ನವೀನ್ ಇಂದು ಬೆಳಗ್ಗೆ ದಿನಸಿ ಖರೀದಿ ಮಾಡಲು ಕ್ಯೂನಲ್ಲಿ ನಿಂತಿದ್ದ ವೇಳೆ ರಷ್ಯಾ ಶೆಲ್​​ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಆತ ಸಾವನ್ನಪ್ಪಿರುವ ಸುದ್ದಿ ಕೇಳುತ್ತಿದ್ದಂತೆ ಪೋಷಕರಲ್ಲಿ ಶೋಕ ಮಡುಗಟ್ಟಿದೆ.

ಉಕ್ರೇನ್​​ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು.. ನವೀನ್ ಮನೆಯತ್ತ ಜನರ ದಂಡು

ಇದನ್ನೂ ಓದಿರಿ: ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಸಾವು

ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದ್ದು, ಈಗಾಗಲೇ ಮೃತ ನವೀನ್​ ಕುಟುಂಬಸ್ಥರೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ. ನವೀನ್ ಇತರೆ ಸ್ನೇಹಿತರೊಂದಿಗೆ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

Russia ukraine war india student lost his life
ಮೃತ ನವೀನ್ ಬಳಿಯ ಪಾಸ್​​ಪೋರ್ಟ್​​

Last Updated : Mar 1, 2022, 5:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.