ETV Bharat / state

ರಾಣೆಬೆನ್ನೂರು: ಒಂಟಿ ಮನೆಗೆ ನುಗ್ಗಿ ದರೋಡೆ ನಡೆಸಿದ 12 ಡಕಾಯಿತರು!

ನಂದಿ ಲೇಔಟ್‌ನಲ್ಲಿರುವ ಒಂಟಿ ಮನೆಯಲ್ಲಿ ದರೋಡೆ ನಡೆದಿದ್ದು, ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ranebennuru robbery case
ಒಂಟಿಮನೆ ಮೇಲೆ ಡಕಾಯಿತರ ದಾಳಿ
author img

By

Published : Jul 12, 2022, 2:26 PM IST

ರಾಣೆಬೆನ್ನೂರು: ನಗರದ ಹೊರವಲಯದಲ್ಲಿರುವ ನಂದಿ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ದರೋಡೆ ನಡೆದಿದೆ. ವಿದ್ಯುತ್ ಗುತ್ತಿಗೆದಾರ ಅಜ್ಜಪ್ಪ ಕಳಸಣ್ಣನವರ್ ಎಂಬುವವರ ಮನೆಗೆ ನುಗ್ಗಿದ 12 ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ, ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿರುವ ಹಣ, ಮೈಮೇಲಿರುವ ಚಿನ್ನದ ಆಭರಣ ಕೊಡುವಂತೆ ತಾಕೀತು ಮಾಡಿದ್ದಾರೆ. ಮಾತ್ರವಲ್ಲದೇ ಮನೆಯಲ್ಲಿದ್ದ ವೃದ್ಧ ಶಿವಪ್ಪರಿಗೆ ದೊಣ್ಣೆಯಿಂದ ಹೊಡೆದು ದರೋಡೆ ನಡೆಸಿದ್ದಾರೆ ಎನ್ನಲಾಗಿದೆ.

ಈ ತಂಡ ಮನೆಯ ಓರ್ವ ಮಹಿಳೆಯ ಕೊರಳಲ್ಲಿದ್ದ ಐದು ತೊಲೆಯ ಚಿನ್ನಾಭರಣ, ಮತ್ತೋರ್ವ ಮಹಿಳೆಯ ಕೊರಳಲ್ಲಿದ್ದ ಎರಡೂವರೆ ತೊಲೆಯ ಚಿನ್ನಾಭರಣ ಎಗರಿಸಿದ್ದಾರೆ. ಕಬ್ಬಿಣದ ರಾಡ್‌ಗಳಿಂದ ಬೀರುವನ್ನು ಒಡೆದಿದ್ದಾರೆ. ಮನೆಯೊಳಗೆ 6 ಜನರ ತಂಡವಿದ್ದರೆ, ಹೊರಗಡೆ 6 ಜನರ ತಂಡ ನಿಂತು ವಾಚ್ ಮಾಡಿದೆ.

ದರೋಡೆ ಪ್ರಕರಣ

ಮನೆಯಲ್ಲಿದ್ದ ಓರ್ವ ಮಹಿಳೆ ಡಕಾಯಿತರ ಕಣ್ಣು ತಪ್ಪಿಸಿ ಹೊರಗೆ ಹೋಗಿ ತಮ್ಮ ಮನೆಗೆ ಡಕಾಯಿತರು ನುಗ್ಗಿರುವ ಬಗ್ಗೆ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಜನರು ಬರುವಷ್ಟರಲ್ಲಿ ಈ ತಂಡ ಪರಾರಿಯಾಗಿದೆ. ಅದಕ್ಕೂ ಮುನ್ನ ಮನೆಯಲ್ಲಿದ್ದ ನಾಲ್ವರ ಕೈಕಟ್ಟಿ ಅವರನ್ನು ಬಾತ್‌ರೂಂನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆಂದು ಮನೆಯಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಲಗೇರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್​ಬಾಗ್ ನಲ್ಲಿ ಫ್ಲವರ್ ಶೋ: ಈ ಬಾರಿ 'ಪವರ್​​ ಸ್ಟಾರ್​​' ವಿಶೇಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.