ರಾಣೆಬೆನ್ನೂರು: ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಇಂದು 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಥಾ ನಡೆಸಲಾಯಿತು.
ಜಾಥಕ್ಕೆ ಸಿಪಿಐ ಲಿಂಗನಗೌಡ್ರ ನೆಗಳೂರು ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ನಾವು ಪ್ರತಿವರ್ಷ ಜನವರಿ ತಿಂಗಳು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಬಸ್, ಆಟೋ ನಿಲ್ದಾಣ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಒಂದು ವಾರ ಸಂಚಾರ ಪೊಲೀಸರ ಮಾರ್ಗದರ್ಶನದಡಿ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಚಾರ ಠಾಣೆ ಎಸ್ಐ ಉದಗಟ್ಟಿ, ಪೇದೆಗಳಾದ ಸೋಮಣ್ಣ ದೊಡ್ಡಮನಿ, ಲಿಂಗರಾಜ ಕರಿಗಾರ, ಮಂಜುನಾಥ, ಎಸ್.ಎನ್.ಲಮಾಣಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳ ಭಾಗಿಯಾಗಿದ್ದರು.